ರೈತರ ಪ್ರತೀಕವಾದ ಹಸಿರು ಟವಲ್ಲಿಗೆ ಬೆಲೆ ಕೊಡಬೇಕಾದ್ದು ನಮ್ಮ ಧರ್ಮ : ಸಿಎಂ

ಹೆಗಲ ಮೇಲೆ‌ ಹಸಿರು ಟವಲ್‌ ಹಾಕಿದ ಸಿಎಂ ಸಿದ್ದರಾಮಯ್ಯ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ನಡೆಸಿದರು. ಪಾಂಡವಪುರ ಪಟ್ಟಣದಲ್ಲಿ ರೋಡ್ ಶೋ‌ ನಡೆಸಿದ ಸಿಎಂ ‘ ಹಸಿರು ಟವಲ್ ಎಂಬುದು ರೈತರು, ರೈತರ ಸಂಘದ ಪ್ರತೀಕ. ಹಸಿರು ಟವಲ್ಲಿಗೆ ಬೆಲೆ ಕೊಡಬೇಕಾದದ್ದು ನಮ್ಮ ಧರ್ಮ ‘ ಎಂದು ಹೇಳಿದ್ದಾರೆ.

‘ಹಾಲಿ ಸಂಸದ ಪುಟ್ಟರಾಜು ಇನ್ನೂ ಅಧಿಕಾರದಲ್ಲಿದ್ದಾನೆ. ಅವರ ಕೊಡುಗೆ ಕ್ಷೇತ್ರಕ್ಕೆ ಶೂನ್ಯ. ಕೇವಲ ಅಧಿಕಾರಕ್ಕಾಗಿ ಚುನಾವಣೆಗೆ ನಿಂತಿದ್ದಾರೆ. ಅವರು ಗೆದ್ದರೆ ಮತ್ತೊಮ್ಮೆ ಒಂದು ವರ್ಷಕ್ಕೆ ಚುನಾವಣೆ ನಡೆಯುತ್ತೆ. ಹೀಗಾಗಿ ಪುಟ್ಟರಾಜು ಸೋಲಿಸಿ ದರ್ಶನ್ ಗೆಲ್ಲಿಸಿ.

ದಿವಂಗತ ಪುಟ್ಟಣ್ಣಯ್ಯ 1500 ಕೋಟಿ ಅಭಿವೃದ್ಧಿ ಕೆಲಸ ಮಾಡಿಸಿದ್ದಾರೆ. ನಾನೂ ಕೂಡ ರೈತ ಸಂಘದ ಕಾರ್ಯಕರ್ತನಾಗಿದ್ದೆ. ಮೂರು ವರ್ಷ ಮೈಸೂರು‌ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ರೈತ ಸಂಘದ ಜೊತೆ ನನಗೆ ಮಾತೃ ಸಂಬಂಧವಿದೆ. ನಾನೂ ಕೂಡ ರೈತ ಸಂಘದಿಂದ‌ ಹಲವಾರು ಹೋರಾಟ ಮಾಡಿದ್ದೆ.

‘ ನನಗೆ ಪುಟ್ಟಣ್ಣಯ್ಯ ಆತ್ಮೀಯ ಗೆಳೆಯರು, ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ಹುರಿಯಾಳುಗಳಿದ್ದಾರೆ. ಆದರೆ,‌ ಪಾಂಡವಪುರ ಕ್ಷೇತ್ರದಲ್ಲಿ ರೈತರ ಪರ ಧನಿಯಿದೆ. ಆ ಕಾರಣಕ್ಕೆ ನಾವು ಅಭ್ಯರ್ಥಿ ಹಾಕಲಿಲ್ಲ. ರೈತ ಧನಿಗೆ ಗೌರವ‌ ನೀಡಬೇಕೆಂದು ಬೆಂಬಲ ಸೂಚಿಸಿದ್ದೇವೆ. ದರ್ಶನ್ ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com