ಕಾಂಗ್ರೆಸ್ ದೇಶವನ್ನು ಜಾತಿ, ಧರ್ಮಗಳ ಮೂಲಕ ಒಡೆಯುತ್ತಿದೆ : ಮೋದಿ

ಕೊಪ್ಪಳದಲ್ಲಿ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ. ಕನ್ನಡದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಗೆ ನಮನ ಮಾಡಿದ ಮೋದಿ ‘ ಪೆಂಡಾಲ್ ಬಹಳ ಚಿಕ್ಕದಾಗಿದೆ. ಪೆಂಡಾಲ್ ಗಿಂತ ಹೆಚ್ಚು ಜನರು ಇದ್ದಾರೆ. ಬಿಸಿಲಿನಲ್ಲಿ ತಾವು ತತ್ತರಿಸುತ್ತಿದ್ದೀರಿ ಅದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ಬಿಸಿಲಿನಲ್ಲಿ‌ ನಿಂತು ನನಗೆ ತೋರಿಸುವ ಪ್ರೀತಿ ನಾನು ಎಂದಿಗೆ ವ್ಯರ್ಥ ಮಾಡುವುದಿಲ್ಲ. ಬಿಸಿಲಿನ ತಾಪದ ತಪಸ್ಸನ್ನು ನಾನು ಅಭಿವೃದ್ಧಿ ಮೂಲಕ ತೋರಿಸಿತ್ತೇನೆ ‘ ಎಂದರು.

‘ ನಮ್ಮ ದೇಶ ರಾಮನನ್ನು ನೆನೆಸುತ್ತದೆ. ಶಬರಿಯನ್ನು ಮರೆಯುವುದಿಲ್ಲ. ರಾಮ ಮತ್ತು ಶಬರಿಯ ಸಂಬಂಧ ಅಂಥ ವಿಶ್ವಾಸ ನಂಬಿಕೆಯದ್ದು. ಬಿಜೆಪಿ ಕಾರ್ಯಕರ್ತರು ಶ್ರೀ ರಾಮರ ಮೇಲೆ ಭಕ್ತಿಯಿದೆ. ನಮ್ಮದು ಸಬ್ಕಾ ಸಾಥ್ ಸಬ್ ಕಾ ವಿಕಾಸ. ೬೦ ವರ್ಷಗಳ ಕಾಲ ಕಾಂಗ್ರೇಸ್ ಆಡಳಿತ ಮಾಡಿದೆ ಕುಟುಂಬ ರಾಜಕಾರಣ ಮಾಡಿದ ಪಕ್ಷ, ಅವರು ತಮ್ಮ ಕುಟುಂಬ ಅಭಿವೃದ್ಧಿಗಾಗಿ ರಾಜಕೀಯ ಮಾಡಿದ್ದಾರೆ.

‘ ಅಧಿಕಾರಕ್ಕಾಗಿ ಯಾವುದೇ ಮಟ್ಟಕ್ಕೂ ಇಳಿಯುತ್ತಾರೆ. ಸ್ವಾರ್ಥಕ್ಕಾಗಿ ಮನೆತನಗಳನ್ನು ಜಾತಿಗಳನ್ವಯ ಜನರನ್ನು ಒಡೆಯುತ್ತಾರೆ. ಕಾಂಗ್ರೆಸ್ ಪಕ್ಷ ತನ್ನ ವಿಕೃತ ಮನಸ್ಸಿನಿಂದ ಈ ದೇಶವನ್ನು ಜಾತಿ‌ ಮೂಲಕ ಒಡೆಯುತ್ತಿದೆ. ಯಡಿಯೂರಪ್ಪನವರ ಸರ್ಕಾರ ಇದ್ದಾಗ ಈ ರಾಜ್ಯದ ಸಂಸ್ಕೃತಿ ಉಳಿದಿತ್ತು.

‘ ಕಾಂಗ್ರೇಸ್ ಸರ್ಕಾರ ಬಂದ್ಮೇಲೆ ಸಂಸ್ಕ್ರತಿ ಉಳಿದಿಲ್ಲ‌ ಪ್ರವಾಸಕ್ಕೂ ಹೋಗಲು ಜಾತಿ ಮಾಡಿದೆ. ಈ ಭಾಗದಲ್ಲಿ ಐತಿಹಾಸಿಕ, ಸಂಸ್ಕೃತಿ ಸ್ಥಳಗಳಿವೆ ಅದರ ಅಭಿವೃದ್ಧಿ ಮಾಡುವ ಕೆಲಸ ಮಾಡಿಲ್ಲ. ೫೦ ಸಾವಿರ ಕೋಟಿ ಯೋಜನೆಯಿಂದ ವಿವಿಧ ಯಾತ್ರ ಸ್ಥಳಗಳ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಕೊಪ್ಪಳದ ಈ‌ ಭಾಗದ ಜನತೆಗೆ ರಾಮಾಯಣ ಸ್ಥಳ ಏನಿದೆ ಅದರಿಂದ ಪ್ರಯೋಜನವಾಗಲಿದೆ ‘

ಆನೆಗೊಂದಿ, ಹ‌ಂಪಿಗೆ ಪ್ರಯೋಜನವಾಗಲಿದೆ. ಹನುಮಾನ ಮತ್ತು ಶ್ರೀರಾಮರ ಪವಿತ್ರ ಸ್ಥಳ ಇದು. ಹವಾಯಿ ಚಪ್ಪಲಿ ಹಾಕುವವನು ಹವಾಯಿ ಕೊಡಲು ವ್ಯವಸ್ಥೆ ಮಾಡಲಾಗಿದೆ. ಯಡಿಯೂರಪ್ಪ ನವರ ಪ್ರಣಾಳಿಕೆಯಲ್ಲಿ ಯಾತ್ರಾ ಸ್ಥಳಗಳಿಗೆ ಹೆಚ್ಚಿನ ಅನುದಾನ ಕೊಡಲಾಗುವುದು.

ಮಲ್ಲಮ್ಮನನ್ನು‌ ನೆನೆಸಿದ ಮೋದಿ’ ಎರಡು ವರ್ಷದ ಕೆಳಗಡೆ ಮಲ್ಲಮ್ಮ‌ನ ಹೆಸರು ಮನ್ ಕಿ ಬಾತ್ ನಲ್ಲಿ ಬೆಂಬಲಿಸಿದೆ. ಶೌಚಾಲಯ ಅಭಿಯನಕ್ಕೆ ಪ್ರೇರಣೆ ಮಲ್ಲಮ್ಮ, ಮಲ್ಲಮ್ಮನಳಂಥ ಮಗಳು ಇಡೀ ದೇಶದಕ್ಕೆ ಆದರ್ಶವಾಗಲಿ. ಮಲ್ಲಮ್ಮ ಜನಿಸಿದ ಈ ಭೂಮಿಗೆ ನನ್ನ‌ ನಮನ. ನಮ್ಮ ತಾಯಿ ಅಕ್ಕಂದಿರು ಗ್ರಾಮದಲ್ಲೂ ಇಂದಿಗೂ ಬಯಲು ಶೌಚಾಲಯಕ್ಕೆ ಹೋಗಬೇಕಾಗಿದೆ.

‘ ಮಹಿಳೆಯರ ಈ ಸ್ಥಿತಿಯನ್ನು ಅರಿತು ಅ ಭಾರತ ಅಭಿಯಾನ ಆರಂಭಿಸಿದ್ದು. ಈ ಅಭಿಯಾನಕ್ಕೆ ನನ್ನನ್ನು ಹಾಸ್ಯ ಮಾಡಿದ್ದರು. ಬಂಗಾರ ಚಮಚವನ್ನು ಹಿಡಿದವರಿಗೆ ಬಡವರ ಕಷ್ಟ ಏನು ಗೊತ್ತು. ಶೌಚಾಲಯದ ವ್ಯವಸ್ಥೆ ಶೇ ೪೦ ರಷ್ಟು ಇದೆ ಶೇ ೮೯ ರಷ್ಟು ಪೂರ್ಣಗೊಂಡಿವೆ ‘ ಎಂದರು.

5 thoughts on “ಕಾಂಗ್ರೆಸ್ ದೇಶವನ್ನು ಜಾತಿ, ಧರ್ಮಗಳ ಮೂಲಕ ಒಡೆಯುತ್ತಿದೆ : ಮೋದಿ

Leave a Reply

Your email address will not be published.