KJP ಬಿಟ್ಟು ಬಿಜೆಪಿ ಸೇರಿದ ಯಡಿಯೂರಪ್ಪ ಮಹಾ ಮೋಸಗಾರ, ಹೇಡಿ : ಬಿ.ಆರ್ ಪಾಟೀಲ್

ಕಲಬುರಗಿ : ಬಿ.ಎಸ್‌.ಯಡಿಯೂರಪ್ಪ ಮಹಾನ್ ಮೋಸಗಾರ, ಹೇಡಿ ಎಂದು ಕಲಬುರಗಿಯಲ್ಲಿ ಆಳಂದ ಶಾಸಕ ಬಿ.ಆರ್.ಪಾಟೀಲ ಹೇಳಿಕೆ ನೀಡಿದ್ದಾರೆ. ‘ ಪ್ರಾದೇಶಿಕ ಪಕ್ಷ ಕಟ್ಟಿದ ಮೇಲೆ ಲಕ್ಷಾಂತರ ಜನರು ಕೆಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ 6 ಕ್ಷೇತ್ರದಲ್ಲಿ ಗೆದ್ದಿದ್ದೆವು.

‘ ಬಿ‌.ಎಸ್‌.ಯಡಿಯೂರಪ್ಪ ಮನೆಯಲ್ಲಿ ನಡೆದಿದ್ದ ಸಭೆಯಲ್ಲಿ ಕೆಜೆಪಿ ಕಟ್ಟಿ ಬೆಳೆಸಲು ನಿರ್ಣಯ ಮಾಡಲಾಗಿತ್ತು. ಆದರೆ 30 ಪ್ರಮುಖರ ಸಭೆ ನಿರ್ಣಯವನ್ನು ಬಿ‌.ಎಸ್.ವೈ ಕೈಬಿಟ್ಟರು ‘ ಎಂದು ಬಿ‌.ಆರ್.ಪಾಟೀಲ ದೂರಿದ್ದಾರೆ.

ಬಿ.ಆರ್ ಪಾಟೀಲ್ ಆಳಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಕೆಜೆಪಿಯಿಂದ ಗೆದ್ದು ಕಾಂಗ್ರೆಸ್ ಸೇರ್ಪಡೆಯಾದವರು. ನಿನ್ನೆ ಆಳಂದದಲ್ಲಿ ಬಿ.ಆರ್.ಪಾಟೀಲ್ ಮೋಸಗಾರ ಎಂದು ಬಿ.ಎಸ್.ವೈ ಟೀಕಿಸಿದ್ದರು. ಬಿ‌ಎಸ್‌ವೈಗೆ ಟಾಂಗ್ ನೀಡಿದ ಬಿ.ಆರ್.ಪಾಟೀಲ್ ‘ ಕೆಜೆಪಿ ಬಿಟ್ಟು ಬಿಜೆಪಿ ಸೇರಿದ ಮಹಾನ್ ಹೇಡಿ ರಾಜಕಾರಣಿ ಬಿ‌.ಎಸ್.ವೈ ‘ ಎಂದಿದ್ದಾರೆ.

2 thoughts on “KJP ಬಿಟ್ಟು ಬಿಜೆಪಿ ಸೇರಿದ ಯಡಿಯೂರಪ್ಪ ಮಹಾ ಮೋಸಗಾರ, ಹೇಡಿ : ಬಿ.ಆರ್ ಪಾಟೀಲ್

Leave a Reply

Your email address will not be published.

Social Media Auto Publish Powered By : XYZScripts.com