ಸಿದ್ರಾಮಯ್ಯ ಹೆಸರು ಕೇಳಿದ್ರೆ ಯಡಿಯೂರಪ್ಪ, ಮೋದಿ ಪ್ಯಾಂಟ್‌ ಒದ್ದೆಯಾಗುತ್ತೆ : ಲೇವಡಿ ಮಾಡಿದ ಕೈ ನಾಯಕ !

ತುಮಕೂರು : ಮೋದಿ ಯಡಿಯೂರಪ್ಪ ವಿರುದ್ದ ಎಪಿಸಿಸಿ ಅಧ್ಯಕ್ಷ ರಘುವೀರ ರೆಡ್ಡಿ ಲೇವಡಿ ಮಾಡಿದ್ದಾರೆ.  ಕಾನೂನು ಸಚಿವ ಟಿ.ಬಿ.ಜಯಚಂದ್ರರ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಹೇಳಿಕೆ ನೀಡಿರುವ ರಘುವೀರ್‌ ರೆಡ್ಡಿ, ಸಿದ್ದರಾಮಯ್ಯರ ಹೆಸರು ಕೇಳಿದ್ರೆ ಯಡಿಯೂರಪ್ಪರ ಪ್ಯಾಂಟು ಒದ್ದೆಯಾಗುತ್ತದೆ.  ಮೋದಿ ಪ್ಯಾಂಟೂ ಒದ್ದೆಯಾಗುತ್ತದೆ. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯರ ಕಂಡರೆ ಭಯ ಇದೆ. ರಾಜ್ಯದ ಜನತೆಗೆ ಕೊಟ್ಟ ಎಲ್ಲಾ ಭರವಸೆಗಳನ್ನು ಪೂರೈಸಿದ ದೇಶದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಿದ್ದಾರೆ.

 

ಟಿ.ಬಿ.ಜಯಚಂದ್ರರಿಗೂ ಸಿ.ಎಂ ಆಗುವ ಅರ್ಹತೆ ಇದೆ. ಆದರೂ ಟಿ.ಬಿ.ಜಯಚಂದ್ರ ಸಿದ್ದರಾಮಯ್ಯರನ್ನು ಬೆಂಬಲಿಸಿ ಸುಮ್ಮನಿದ್ದಾರೆ. ದೇವೇಗೌಡರನ್ನ ಮೋದಿ ಹೊಗಳ್ತಾರೆ.  ಮೋದಿಯನ್ನ ದೇವೇಗೌಡ ಹೊಗಳ್ತಾರೆ. ಇಬ್ಬರಲ್ಲೂ ಮ್ಯಾಚ್ ಫಿಕ್ಸಿಂಗ್ ನಡೆದಿದೆ. ಬಿಜೆಪಿಯೊಂದಿಗೆ ದೇವೇಗೌಡರು ವ್ಯಾಪಾರಕ್ಕೆ ನಿಂತಿದ್ದಾರೆ. ಇಂತಹ ಕಳ್ಳರಿಗೆ ವೋಟ್ ಹಾಕಬೇಡಿ ಎಂದು ಹರಿಹಾಯ್ದಿದ್ದಾರೆ.

Leave a Reply

Your email address will not be published.