ಚುನಾವಣಾ ಹೊತ್ತಲ್ಲೇ ವರ್ತೂರು ಪ್ರಕಾಶ್‌ಗೆ ಎದುರಾಯ್ತು ಸ್ತ್ರೀ ಸಂಕಷ್ಟ : ವಿಡಿಯೋ ವೈರಲ್

ಕೋಲಾರ : ಶಾಸಕ ವರ್ತೂರ್ ಪ್ರಕಾಶ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ.  ನನಗೆ ಕೆಲಸ ಕೊಡಿಸುವುದಾಗಿ ಹೇಳಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ವಿವರ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಮುಖಕ್ಕೆ ಬಟ್ಟೆಕಟ್ಟಿಕೊಂಡು ಮಾತನಾಡಿರೋ ಮಹಿಳೆ, ತನ್ನ ಹೆಸರು ಹಾಗೂ ವಿಳಾಸವನ್ನು ಬಾಯ್ಬಿಟ್ಟಿಲ್ಲ. ನನಗೆ ಕೆಲಸದ ಅವಶ್ಯಕತೆ ಇತ್ತು. ವರ್ತೂರು ಪ್ರಕಾಶ್‌ ಅವರ ಮನೆಯ ಬಳಿ ಸಹಾಯ ಬೇಡಿ ಹೋದಾಗ ಅಸಭ್ಯವಾಗಿ ವರ್ತಿಸಿ, ಲೈಂಗಿಕವಾಗಿ ತೀರಾ ಕೆಟ್ಟದಾಗಿ ನನ್ನನ್ನು ದುರುಪಯೋಗ ಪಡಿಸಿಕೊಂಡಿರುವುದಾಗಿ ಕೋಲಾರ ಶಾಸಕ ವರ್ತೂರ್ ಪ್ರಕಾಶ್ ವಿರುದ್ಧ ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ ಮಹಿಳೆಯರನ್ನು ಅಸಭ್ಯವಾಗಿ ಬಳಸಿಕೊಳ್ಳುವ ಶಾಸಕ ವರ್ತೂರ್ ಪ್ರಕಾಶ್‌ಗೆ ಮತ ಹಾಕದೆ ಬೇರೆಯಾರಿಗಾದರೂ ಮತ ಹಾಕಿ ಎಂದು ಸಾರ್ವಜನಿಕರಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com