ಗದಗ : ಪ್ರಕಾಶ್‌ ರೈ ಕಾರಿಗೆ ಬಿಜೆಪಿ ಕಾರ್ಯಕರ್ತರಿಂದ ಮುತ್ತಿಗೆ, ಕಪ್ಪು ಬಟ್ಟೆ ಪ್ರದರ್ಶನ

ಗದಗ : ಬಿಜೆಪಿ ಕಾರ್ಯಕರ್ತರು ನಟ ಪ್ರಕಾಶ್ ರೈಗೆ ಕಾರಿಗೆ ಮುತ್ತಿಗೆ ಹಾಕಿ ಕಪ್ಪುಬಟ್ಟೆ ಪ್ರದರ್ಶನ ಮಾಡಿದ ಘಟನೆ ಗದಗದಲ್ಲಿ ನಡೆದಿದೆ.

ಪ್ರಕಾಶ್‌ ರೈ ಗದಗ ನಗರದ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದ ವೇಳೆ ಮುತ್ತಿಗೆ ಹಾಕಲಾಗಿದೆ. ಇಂದು  ಖಾಸಗಿ ಹೋಟೆಲ್‌ನಲ್ಲಿ ರೈ, ಸಮಕಾಲೀನ ವಿದ್ಯಾಮಾನಗಳ ಕುರಿತು ಸಂವಾದ ಕಾರ್ಯಕ್ರಮ ನಡೆಯಬೇಕಿದ್ದು, ಈ ಹಿನ್ನೆಲೆಯಲ್ಲಿ ಗದಗಕ್ಕೆ ರೈ ಆಗಮಿಸಿದ್ದರು. ದಾರಿ ಮಧ್ಯೆ ತೋಂಟದಾರ್ಯಮಠಕ್ಕೆ ಭೇಟಿ ನೀಡಿದ್ದು, ಈ ವೇಳೆ  ಕಪ್ಪು ಬಟ್ಟೆ ಪ್ರದರ್ಶಿಸಿ, ಕಾರಿಗೆ ಮುತ್ತಿಗೆ ಹಾಕಿ ಪ್ರಕಾಶ್ ರೈ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com