ನಮಗೆ ಅಧಿಕಾರ ಸಿಕ್ಕ 6ತಿಂಗಳಲ್ಲಿ ನಿಮ್ಮ ಮನೆ ನಲ್ಲಿ ತಿರುವಿದ್ರೆ ನೀರು ಬರುವಂತೆ ಮಾಡ್ತೀನಿ : ಮಾತು ಕೊಟ್ಟ ಅಮಿತ್ ಶಾ

ಗದಗ :  ರಾಜ್ಯದಲ್ಲಿ ಬಿಜೆಪಿಯ ಸುನಾಮಿ ಬೀಸುತ್ತಿದೆ. ಈ ಸುನಾಮಿಯಲ್ಲಿ ಸಿದ್ದರಾಮಯ್ಯ ಕೊಚ್ಚಿ ಹೋಗಲಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ನರಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ್ ಪರ ಪ್ರಚಾರ ವೇಳೆ ಮಾತನಾಡಿದ ಅವರು,  ಯಾರ ಬಳಿ ವಂದೇ ಮಾತರಂ ಗೀತೆಗೆ ಸಮಯವಿಲ್ಲವೋ ಅವರೆಂದು ದೇಶದ ಬಗ್ಗೆ ಚಿಂತಿಸೋದು ಅಸಾಧ್ಯ. ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದವರಿಂದ ಈ ಬಾರಿ ಚುನಾವಣೆಯಲ್ಲಿ ಲೆಕ್ಕ ಕೇಳಿ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಸ್ವತ: ಸಿದ್ದರಾಮಯ್ಯ ಅವರೇ ಸೋತು ಸುಣ್ಣವಾಗ್ತಾರೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಬರಲು ಹೇಗೆ ಸಾಧ್ಯ?  ಎಂದಿದ್ದಾರೆ.

ಇದೇ ವೇಳೆ ಮಹದಾಯಿ ಬಗ್ಗೆ ಮಾತನಾಡಿದ ಅವರು, ನಮಗೆ ಅಧಿಕಾರ ಸಿಕ್ಕ ಆರು ತಿಂಗಳೊಳಗೆ ಪ್ರತಿಯೊಬ್ಬರ ಮನೆ ನಲ್ಲಿ ತಿರುವಿದ್ರೆ ಸಾಕು ನೀರು ಲಭಿಸುವಂತೆ ಮಾಡುತ್ತೇವೆ. ಅಧಿಕಾರಕ್ಕೆ ಬಂದ್ರೆ ಸೌಹಾರ್ದಯುತ ಮಾತುಕತೆ ಮೂಲಕ ಮಹದಾಯಿ ನೀರು ಒದಗಿಸಲಾಗುವುದು. ಈ ಭಾಗದ ರೈತರ ಭೂಮಿಗೆ ನೀರು ಹರಿಸುತ್ತೇವೆ. ಮಹದಾಯಿ ನೀರಿನ ಮೂಲಕ ಈ ಭಾಗದ ಜನರ ಬಾಳನ್ನು ಹಸನಾಗಿಸುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿಗೆ ಮಹದಾಯಿ ವಿವಾದ ಅಸ್ತ್ರವಾಗಿದೆಯಾ ಅನ್ನೋ ಪ್ರಶ್ನೆಗೂ ಕಾರಣವಾಗಿದೆ.

 

 

 

Leave a Reply

Your email address will not be published.