ಚಿಲ್ಲರೆ ಕಾಸು ಕೂಡಿಟ್ಟು ಚುನಾವಣಾ ಖರ್ಚಿಗಾಗಿ HDK ಗೆ 2 ಸಾವಿರ ರೂ ಹಣ ಕೊಟ್ಟ ವಿದ್ಯಾರ್ಥಿನಿ !

ಚಿಕ್ಕಮಗಳೂರು  : ಏಳನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಒಂದು, ಎರಡು ಹಾಗೂ ಐದು ರೂಪಾಯಿಯ ಎರಡು ಸಾವಿರ ನಾಣ್ಯಗಳನ್ನು ಕೂಡಿಟ್ಟು ಚುನಾವಣೆಯ ಖರ್ಚಿಗಾಗಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿಯವರಿಗೆ ನೀಡಿದ್ದಾಳೆ.

ಭಾನುವಾರ ಚಿಕ್ಕಮಗಳೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿ ಹರೀಶ್‌ ಪರ ಎಚ್‌.ಡಿ.ಕೆ ಪ್ರಚಾರ ಮಾಡಲು ತೆರಳಿದ್ದರು. ಈ ವೇಳೆ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ವೇದಿಕೆಯ ಮೇಲೆ ಬಂದು 2 ಸಾವಿರ ರೂ ಹಣವನ್ನು ಖರ್ಚಿಗೆಂದು ನೀಡಿದ್ದಾಳೆ. ಇದೇ ನನ್ನ ಆಸ್ತಿ. ಇದನ್ನೇ ನಾನು ಸಂಪಾದನೆ ಮಾಡಿದ್ದು, ನಿಜಕ್ಕೂ ನನಗೆ ಖುಷಿ ಎನಿಸುತ್ತಿದೆ. ನನ್ನನ್ನು ಮರೆಯಬೇಡಿ ಎಂದು ಮಚಯಾಚನೆ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com