ತನ್ನ ಪಕ್ಷದ ಅಭ್ಯರ್ಥಿ ವಿರುದ್ಧವೇ ತಿರುಗಿಬಿದ್ದ ಕುಮಾರಸ್ವಾಮಿ : ಬಂಡಾಯ ಅಭ್ಯರ್ಥಿಗೆ ಫುಲ್‌ ಸಪೋರ್ಟ್‌ !!

ಚಿಕ್ಕಬಳ್ಳಾಪುರ : ತನ್ನ ಪಕ್ಷದ ಅಭ್ಯರ್ಥಿ ವಿರುದ್ದವೇ ಮಾಜಿ ಸಿಎಂ ಕುಮಾರಸ್ವಾಮಿ ತಿರುಗಿಬಿದ್ದಿದ್ದಾರೆ. ಶಿಡ್ಲಘಟ್ಟ ಟಿಕೆಟ್ ವಂಚಿತ ರಾಜಣ್ಣ ಅವರಿಗೆ ಪಕ್ಷೇತರವಾಗಿ ನಿಲ್ಲುವಂತೆ ಕುಮಾರಸ್ವಾಮಿ ಹೇಳಿದ್ದು, ಜೆಡಿಎಸ್‌ ಸ್ಪರ್ಧಿ ಮೇಲೂರು ರವಿ ಅವರನ್ನು ಸೋಲಿಸುವಂತೆ  ಪ್ರಚೋದನೆ ನೀಡಿರುವುದಾಗಿ ಹೇಳಿದ್ದಾರೆ.

ಜೆ.ಡಿ.ಎಸ್ ಅಭ್ಯರ್ಥಿ ಮೇಲೂರು ರವಿ ಗೆದ್ದರೆ ಕುಮಾರಸ್ವಾಮಿ ಗೆ ಏನು ಪ್ರಯೋಜನವಿಲ್ಲಂತೆ. ಆದ ಕಾರಣ ಟಿಕೆಟ್ ವಂಚಿತ ರಾಜಣ್ಣ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಮೇಲೂರು ರವಿ ನನ್ನ ಬಳಿ ಬಂದಿಲ್ಲ. ನನಗೆ ಕಿಂಚಿತ್ತು ಗೌರವ ಕೊಡುವುದಿಲ್ಲ. ಕುಮಾರಸ್ವಾಮಿ ಗೆ ತೊಡೆ ತಟ್ಟಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾನೆ. ರವಿ ಕುರಿತು ನಾನಾಗಲೇ ಜನರಿಗೆ ಮೆಸೇಜ್ ಪಾಸ್ ಮಾಡಿದ್ದೇನೆ ಎಂದಿರುವ ಆಡಿಯೋ ಈಗ ಏನ್‌ಸುದ್ದಿಗೆ ಲಭ್ಯವಾಗಿದೆ.

ಜೊತೆಗೆ ಹತ್ತು ಕೋಟಿ ಖರ್ಚುಮಾಡಿ ರಾಜಣ್ಣರನ್ನು ಗೆಲ್ಲಿಸಿಕೊಳ್ಳುವುದಾಗಿ ಭರವಸೆ ನೀಡಿರುವ ಆಡಿಯೋ ಈಗ ವೈರಲ್ ಆಗಿದೆ.

 

Leave a Reply

Your email address will not be published.