ನೀತಿ ಸಂಹಿತೆ ಬಿಸಿಯ ಮಧ್ಯೆಯೂ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಅಪ್ರಾಪ್ತ ಮಕ್ಕಳ ಬಳಕೆ…..!

ಚಾಮರಾಜನಗರ : ಚುನಾವಣಾ ನೀತಿ ಸಂಹಿತೆ ನಡುವೆಯೂ ಅಪ್ರಪ್ತ ಮಕ್ಕಳನ್ನು ಬಳಸಿಕೊಂಡು ಬಿಜೆಪಿ ಅಭ್ಯರ್ಥಿ ಒಂದು ಕಡೆ ಚುನಾವಣಾ ಪ್ರಚಾರದಲ್ಲಿ ತಲ್ಲಿನ ನಾಗಿ ಮತಯಾಚನೆ ಮಾಡಿದ್ರೆ, ತಂದೆಗಿಂತ ನಾನೇನು ಕಡಿಮೆ ಎನ್ನುವಂತೆ ಅಭ್ಯರ್ಥಿಯ ಪುತ್ರನೂ ಸಹ ಮಕ್ಕಳನ್ನು ಬಳಸಿ ಕೊಂಡು ಮತಯಾಚನೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.

ಚಾಮರಾಜನಗರ ಜಿ ಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಯಳಂದೂರು ತಾಲೂಕಿನ ಮದ್ದೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎನ್.ನಂಜುಂಡಸ್ವಾಮಿ ಪಾದಯಾತ್ರೆ ಮಾಡುವ ಮೂಲಕ ಪ್ರ ಚಾರ ಮಾಡಲು ಅಪ್ರಾಪ್ತ ಮಕ್ಕಳನ್ನು ಬಳಸಿಕೊಂಡರೆ ಅಭ್ಯರ್ಥಿ ಜಿ.ಎನ್.ನಂಜುಂಡಸ್ವಾಮಿ ಪುತ್ರ ಲೋಕೇಶ್ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಚಾಮರಾಜನಗರ ತಾಲೂಕಿನ ಉಮ್ಮತ್ತೂರಿನಲ್ಲಿ ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದು ಕಂಡುಬಂದಿದೆ. ಎರಡು ಗ್ರಾಮಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಬಿಜೆಪಿಯ ಕರಪತ್ರ ಹಿಡಿದು ಮನೆ ಮನೆಗೆ ಹಂಚುವುದು ಒಂದಾದರೆ, ಮತ್ತಷ್ಟು ಮಕ್ಕಳು ಬಿಜೆಪಿಯ ಪ್ರಮುಖ ಮುಖಂಡರ ಭಾವಚಿತ್ರವುಳ್ಳ ಪೋಸ್ಟರ್ ಹಿಡಿದು ಬಿಜೆಪಿ ಗೆಲ್ಲಿಸಿ ಎಂದು ಘೋಷಣೆ ಕೂಗಿ ಕುಣಿದು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದ ಸನ್ನಿವೇಶ ಕಂಡುಬಂದಿದೆ.

ಈ ಭಾ ರಿ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ಬೆಂಬಲವಾಗುತ್ತಿದೆ. ಜನರು ಸಹ ಈ ಭಾರಿ ಬಿಜೆಪಿ ಬೆಂಬಲಿಸುವ ಮನಸು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೊಳ್ಳೇಗಾಲ ಕ್ಷೇತ್ರ ಪ್ರವಾಸದಿಂದ ಈ ಭಾರಿ ಬಿಜೆಪಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಗೆಲುವು ಖಚಿತ ಎಂದು ಇಬ್ಬರೂ ಅಭ್ಯರ್ಥಿಗಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com