ಮೋದಿ ಇಷ್ಟು ಕೆಳಮಟ್ಟಕ್ಕಿಳಿದು ಮಾತನಾಡುವುದು ದೇಶಕ್ಕೆ ಶೋಭೆಯಲ್ಲ : ಮನಮೋಹನ್‌ ಸಿಂಗ್‌

ಬೆಂಗಳೂರು : ಪ್ರಧಾನಿ ಮೋದಿಯವರ ಕಾರ್ಯ ವೈಖರಿ ಸರಿಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಅವರು ದೇಶದ ಪ್ರಧಾನ ಮಂತ್ರಿಯಂತೆ ನಡೆದುಕೊಳ್ಳುತ್ತಿಲ್ಲ ಎಂದು ಮಾಜಿ ಪ್ರಧಾನಿ ಮನ ಮೋಹನ್‌ ಸಿಂಗ್ ಹೇಳಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾತನಾಡಿದ ಮನಮೋಹನ್‌ ಸಿಂಗ್‌, ಮೋದಿ ನೇತೃತ್ವದ ಸರ್ಕಾರ ತನ್ನಿಷ್ಟದಂತೆ ಕೆಲಸ ಮಾಡುತ್ತಿದ್ದ ಯುಪಿಎ ಸರ್ಕಾರದ ಅವಧಿಯಲ್ಲಿನ ಸಾಧನೆಗಳಿಗಿಂತ ಕೆಳಗಿಳಿಯುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ. ತನ್ನ ವಿರೋಧ ಪಕ್ಷದವರ ವಿರುದ್ಧ ಮಾತನಾಡಲು ಮೋದಿಯವರನ್ನು ಬಿಟ್ಟು ಇನ್ಯಾವ ಪ್ರಧಾನಿಯೂ ತನ್ನ ಕಚೇರಿಯನ್ನು ಬಳಸಿರಲಿಲ್ಲ. ಪ್ರಧಾನಿಯಾದವರು ಇಷ್ಟು ಕೆಳಮಟ್ಟದ ಮಾತನ್ನಾಡಬಾರದು. ಇದು ದೇಶಕ್ಕೂ ಒಳ್ಳೆಯದಲ್ಲ ಎಂದಿದ್ದಾರೆ.

ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಅಭಿವೃದ್ಧಿ  ಸೂಚಕ ಶೇ.7ರಷ್ಟಿತ್ತು. ಆದರೆ ಈಗ ಅದೂ ಕಡಿಮೆಯಾಗಿದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿಯನ್ನು ಜನರ ಮೇಲೆ ಹೇರಿದ್ದು ಇವೆರಡೂ ಮೋದಿ ಸರ್ಕಾರದ ಪ್ರಮಾದಗಳು ಎಂದಿದ್ದಾರೆ. ಅಲ್ಲದೆ ಉದ್ಯೋಗ ಎಂಬುದು ಯುವಜನರಿಗೆ ಕನಸಾಗಿ ಉಳಿಯಲಿದೆ. ಇದು ದೇಶಕ್ಕೆ ದೊಡ್ಡ ಮಾರಕ ಎಂದಿದ್ದಾರೆ.

ಒಳ್ಳೆಯ ನಾಯಕತ್ವದಿಂದ ಜನರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತವೆ. ಆದರೆ ಮೋದಿ ನಾಯಕತ್ವ ಇದಕ್ಕೆ ತದ್ವಿರುದ್ದವಾಗಿದೆ. ಜನರನ್ನು ಮರುಳು ಮಾಡಲು ಕೆಳಮಟ್ಟದ ಪದಪ್ರಯೋಗ ಮಾಡುತ್ತಿದ್ದಾರೆ. ಮೋದಿ ಅವಧಿಯಲ್ಲಿ ಬ್ಯಾಂಕ್‌ಗಳು ಅದ್ವಾನವಾಗಿದ್ದು, ಇದರಿಂದ ಜನ ಬಹಳ ತೊಂದರೆ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com