WATCH : ಕುಂಡಾಲಾ ಸಂಗಮ್‌ ಅಲ್ಲ, ಅದು ಕೂಡಲ ಸಂಗಮ : ಮೋದಿಗೆ ಕನ್ನಡದ ಪಾಠ ಮಾಡಿದ ಸಿದ್ದರಾಮಯ್ಯ

ಬೆಂಗಳೂರು : ಇತ್ತೀಚೆಗಷ್ಟೇ ರಾಹುಲ್‌ ಗಾಂಧಿಯವರು ವಿಶ್ವೇಶ್ವರಯ್ಯ ಅವರ ಹೆಸರನ್ನು ತಪ್ಪಾಗಿ ಉಚ್ಛಾರ ಮಾಡಿದ್ದಕ್ಕೆ ಅಣಕವಾಡಿದ್ದ ಮೋದಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಿನ್ನೆ ಬಾಗಲಕೋಟೆಯಲ್ಲಿ ಪ್ರಧಾನಿ ಮೋದಿ ಕೂಡಲ ಸಂಗಮ ಎಂದು ಹೇಳುವ ಬದಲು ಕುಂಡಾಲಾ ಸಂಗಮ್ ಎಂದು ತಪ್ಪಾಗಿ ಉಚ್ಛರಿಸಿದ್ದರು. ಇದೇ ವಿಚಾರವನ್ನು ಟ್ವಿಟರ್‌ನಲ್ಲಿ ಪ್ರಸ್ತಾಪಿಸಿರುವ ಸಿದ್ದರಾಮಯ್ಯ, ಅದು ವಕೂಡಲ ಸಂಗಮ, ಕುಂಡಾಲಾ ಸಂಗಮ್‌ ಅಲ್ಲ. ತಪ್ಪು ಉಚ್ಛಾರ ಮಾಡುವುದು ದೊಡ್ಡ ವಿಚಾರವೇನೂ ಅಲ್ಲ. ಕನ್ನಡಿಗರು ಉದಾರ ಮನಸ್ಸಿನವರು. ಇಂತಹ ತಪ್ಪುಗಳನ್ನು ಕ್ಷಮಿಸುತ್ತಾರೆ . ನಿಮ್ಮ  ಉಚ್ಛಾರಣೆಯಲ್ಲೇ ತಪ್ಪಿಟ್ಟುಕೊಂಡು ಬೇರೆಯವರ ತಪ್ಪಿನ ಬಗ್ಗೆ ಮಾತಾಡುತ್ತಿರುವುದು ದುರದೃಷ್ಟಕರ ಎಂದು ಟ್ವೀಟ್ ಮಾಡುವ ಮೂಲಕ ಮೋದಿಯವರ ಕಾಲೆಳೆದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com