ಸಿದ್ದರಾಮಯ್ಯ ಸಿಎಂ ಆಗೋದು ಇರಲಿ, ಈ ಬಾರಿ MLA ನೂ ಆಗಲ್ಲ : ಭವಿಷ್ಯ ನುಡಿದ ಕುಮಾರಸ್ವಾಮಿ

ಬೆಂಗಳೂರು : ನಾನು ಈ ಬಾರಿ ಸಿಎಂ ಆಗಲ ್ಲ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದಾರೆ. ಆದರೆ ನಾನು ಹೇಳ್ತೀನಿ ಕೇಳಿ. ಸಿದ್ದರಾಮಯ್ಯ ಈ ಬಾರಿ ಮುಖ್ಯಮಂತ್ರಿ ಆಗೋದಿರಲಿ ಶಾಸಕನೇ ಆಗೋದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 113 ಸ್ಥಾನ ಗೆಲ್ಲುವ ಸಂಪೂರ್ಣ ವಿಶ್ವಾಸ ಇದೆ. ಆದರೆ, ಮಾಧ್ಯಮಗಳು 30-35ಕ್ಕೆ ಸೀಮಿತ ಮಾಡಿದೆ. ಮಾಧ್ಯಮಗಳ ಲೆಕ್ಕಾಚಾರ ಪರಿಗಣಿಸಿದರೂ ಸಹ ಜೆಡಿಎಸ್ ಬೆಂಬಲ ಇಲ್ಲದೆಯೇ ಸರಕಾರ ರಚನೆ ಸಾಧ್ಯವಿಲ್ಲ. ಅಂಥ ಸಂದರ್ಭ ಬಂದರೆ, ಜನತೆಯ ಒಳಿತಿಗಾಗಿ ಜೆಡಿಎಸ್ ಯೋಜನೆಗಳನ್ನು ಅನುಷ್ಠಾನಗೊಳಿಸುವ ಪಕ್ಷದ ಜತೆ ಮಾತುಕತೆಗೆ ಸಿದ್ಧ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮೈತ್ರಿಗೆ ಸಿದ್ದ ಎಂಬ ಸಂದೇಶ ರವಾನಿಸಿದ್ದಾರೆ.

ದಿನಕ್ಕೆ 10 ಕಡೆ ಪ್ರಚಾರ ಮಾಡಿದರೂ, ಒಂದು ಕ್ಷಣವೂ ಟಿವಿಯಲ್ಲಿ ತೋರಿಸಲ್ಲ. ಬಿಜೆಪಿ-ಕಾಂಗ್ರೆಸ್‌ನ ಕಾರ್ಯಕ್ರಮಗಳೇ ಇಡಿ ದಿನ ಟಿವಿಯಲ್ಲಿ ಬರುತ್ತೆ. ಜೆಡಿಎಸ್ ಕಾರ್ಯಕ್ರಮಗಳನ್ನು ತೋರಿಸುವುದಿಲ್ಲ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.
ಅಧಿಕಾರಕ್ಕೆ ಬಂದ ತಕ್ಷಣ ವಿಧಾನಸೌಧದ ಮೂರನೇ ಮಹಡಿ ಸ್ಪಚ್ಛ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ಕಚೇರಿ ಸೇರಿದಂತೆ ಎಲ್ಲವೂ ಗಬ್ಬೆದ್ದು ಹೋಗಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com