ಪ್ರಧಾನಿ ಮೋದಿಗೆ ಲೀಗಲ್ ನೋಟಿಸ್‌ ನೀಡಿದ ಸಿದ್ದರಾಮಯ್ಯ…..ಕಾರಣವೇನು ?

ಬೆಂಗಳೂರು : ಸಿದ್ದರಾಮಯ್ಯ ಸರ್ಕಾರ 10% ಸರ್ಕಾರ ಎಂದು ಲೇವಡಿ ಮಾಡಿದ್ದ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಲೀಗಲ್ ನೋಟಿಸ್‌ ನೀಡಿದ್ದಾರೆ.

ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ವಿಧಾನ ಪರಿಷತ್‌ ಸದಸ್ಯ ವಿ.ಎಸ್‌ ಉ್ರಪ್ಪ,  ಮೋದಿ ಹೇಳಿಕೆಯಿಂದ ಸಿದ್ದರಾಮಯ್ಯನವರಿಗೆ ಮಾನಹಾನಿಯಾಗಿದೆ. ಆದ್ದರಿಂದ 100 ಕಟಿ ಪರಿಹಾರ  ಕೋರಿ ಮೋದಿಗೆ ಲೀಗಲ್ ನೋಟಿಸ್‌ ನೀಡಿದ್ದಾರೆ.  ಮೋದಿ ಉನ್ನತ ಹುದ್ದೆಯಲ್ಲಿದ್ದಾರೆ. ಅಂತಹವರು ಇಂತಹಾ ಮಾತನಾಡುವುದು ಶೋಭೆ ತರುವುದಿಲ್ಲ ಎಂದಿದ್ದಾರೆ.

ಅಲ್ಲದೆ  ಪದೇ ಪದೇ ಸಿದ್ದರಾಮಯ್ಯನವರ ವಾಚ್‌ ಪ್ರಕರಣವನ್ನು ಕೆದಕುತ್ತಿದ್ದಾರೆ.  ಸಿದ್ದರಾಮಯ್ಯರದ್ದು ಸೀದಾ ರುಪಯ್ಯ  ಸರ್ಕಾರ ಎಂದು ತೇಜೋವಧೆ ಮಾಡುತ್ತಿದ್ದಾರೆ. ಕೂಡಲೆ ಮೋದಿ ಸಿಎಂ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕ್ರಿಮಿನಲ್‌ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com