WATCH : ಲೇ ಮಗನೇ…ನಮ್ಮನೇಲೇ ಉಂಡು ನಮಗೇ ದ್ರೋಹ ಬಗೀತೀಯಾ : ಬಿಜೆಪಿ ಅಭ್ಯರ್ಥಿಗೆ ಕಾಶಪ್ಪನವರ್‌ ಆವಾಜ್‌

ಬಾಗಲಕೋಟೆ : ಹುನಗುಂದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್‌ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಲೇ ಮಗನೆ ನಿನಗೆಷ್ಟು ತಾಕತ್ತಿದೆ ಲೇ ಗಂಡಮಗನೆ. ಇದೇ 15 ರಂದು ಫಲಿತಾಂಶದ ದಿನ ನೀನು ಮುಟ್ಟಿ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡುತ್ತೇನೆ. ನನ್ನ ವಿರುದ್ಧ ಮಾತನಾಡೋಕೆ ನಿನಗೆಷ್ಟು ತಾಕತ್ತಿದೆ. ಪದೇ ಪದೇ ಇಳಕಲ್ ನಲ್ಲಿ ಬಿಜೆಪಿ ಇದೆ ಅಂತ ಹೇಳ್ತಾನೆ. ಕಳೆದ ಬಾರಿ ಇಟ್ಟಿಲ್ಲವೇ ಎಣ್ಣೆ. ಈ ಸಾರಿನೂ ಮುಟ್ಟಿ ಮಟ್ಟಿ ನೋಡಿಕೊಳ್ಳುವಂಗೆ ಮಾಡ್ತೀನಿ ಎಂದು ಗುಡುಗಿದ್ದಾರೆ.

ಇಬ್ಬರು ಹುಚ್ಚನಾಯಿಗಳು ನಮ್ಮ ಮನೆಯಲ್ಲಿ ಉಂಡು ಈಗ ಬಿಜೆಪಿ ಸೇರಿ ನಮಗೆ ದ್ರೋಹ ಮಾಡ್ತಿದ್ದಾರೆ. ಇನ್ನಿಬ್ರು ಎಂಐಎಂ‌ ಸೇರಿದ್ದಾರೆ. ಇನ್ನೊಂದು ಕೊಪ್ಪಳದಿಂದ ಜೆರ್ಸಿ ಆಕಳ ಬಂದಿದೆ ಎಂದು ಎಸ್ ಆರ್ ನವಲಿ ಹಿರೆಮಠ ಬಗ್ಗೆ ಲೇವಡಿ ಮಾಡಿದ್ದಾರೆ. ಇನ್ನೂ‌ ಹತ್ತು ಜನ ನನ್ನೆದುರು ಬಂದರೂ ನಾನು ಬಗ್ಗೋದಿಲ್ಲ. ಕುಮಾರಸ್ವಾಮಿಗೆ ಇಲ್ಲಿ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ಕೊಡೋದಕ್ಕೆ‌ ಧಮ್ ಇಲ್ಲ. ಬಿಜೆಪಿಗೆ ಸಪೋರ್ಟ್ ಮಾಡ್ತಿದ್ದಾನೆ ಅದಕ್ಕೆ ರಾಹುಲ್ ಗಾಂಧಿ ಜೆಡಿಎಸ್‌ನ್ನು ಬಿ. ಟೀಂ ಅಂತ ಕರೆದಿದ್ದು ಎಂದು ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com