ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ನಿಮ್ಮ ಹಾಸಿಗೆ ಮೇಲೂ ಕಣ್ಣು ಹಾಕ್ತಾರೆ ಹುಷಾರ್‌…!

ಯಾದಗಿರಿ : ಸುರಪುರದ ಕಕ್ಕೇರಾ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಎಸ್ ಈಶ್ವರಪ್ಪ ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ಭಯ. ಅದ್ದರಿಂದ ಪಕ್ಷದವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.  ಸಿದ್ದರಾಮಯ್ಯ ಸೋಲಿನ ಭಯಕ್ಕೆ, ಎರಡೂ ಕ್ಷೇತ್ರದಲ್ಲಿ ನಿಂತಿದ್ದಾರೆ. ಚಾಮುಂಡೇಶ್ವರಿ, ಬಾದಾಮಿ, ಈ ಎರಡೂ ಕ್ಷೇತ್ರದಲ್ಲಿ ಸಿದ್ದರಾಮಯ್ಯನ ಸೋಲು ಖಚಿತ. ಮಹಾದಾಯಿ ಯೋಜನೆಯಲ್ಲಿ ರಾಜಕೀಯ ಮಾಡಿದ್ದು ಸೋನಿಯಾ ಗಾಂಧಿ,  ರಾಮಲಿಂಗ ರೆಡ್ಡಿ ಯವರಿಗೆ ಮಂಪರು ಪರೀಕ್ಷೆ ಮಾಡಿಸಿದ್ರೆ ಅವರ ಮಾಡಿರುವ ಭ್ರಷ್ಟಾಚಾರ ಬಯಲಿಗೆ ಬರುತ್ತದೆ ಎಂದಿದ್ದಾರೆ.

ಜನರ ಕಲ್ಯಾಣ ಮಾಡದೇ ಚುನಾವಣ ಹತ್ತಿರ ಬಂದಾಗ ಇಲ್ಲಿನ ಸಚಿವರು ವೈಯಕ್ತಿಕ ಕಲ್ಯಾಣ ಮಾಡಿಕೊಂಡಿದ್ದಾರೆ. ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸಬೇಕು. ಕುಡಿಯುವ ನೀರಿನ ಹಣವನ್ನು ಸಚಿವರು ಗುಳುಂ ಮಾಡಿದ್ದಾರೆ. ಈ ಮಂತ್ರಿಯ ಭ್ರಷ್ಟಾಚಾರ ಒಂದಲ್ಲ, ಎರಡಲ್ಲ. ವಿದ್ಯಾರ್ಥಿಗಳ ಕೊಟ್ಟ ಹಾಸಿಗೆ ತಲೆ ದಿಂಬಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಮುಂದೆ ನಿಮ್ಮ ಹಾಸಿಗೆ ಮೇಲೆ ಕಣ್ಣು ಹಾಕ್ತಾರೆ ಎಚ್ಚರ. ಕಾಂಗ್ರೆಸ್ ಪಕ್ಷದವರಿಗೆ ಹಾಸಿಗೆ ಮೇಲೆ ಯಾಕಿಷ್ಟು ವ್ಯಾಮೋಹ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ಸಿಗರು ಸೂಟ್ ಕೇಸ್ ಅಲ್ಲಿ ಕೆಲವರ ಬಗ್ಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಇಟ್ಟುಕೊಂಡಿರುತ್ತಾರೆ. ಯಾವ ಮಂತ್ರಿ ಮೇಲೆ ಆರೋಪ ಬರುತ್ತೋ ತಕ್ಷಣ ಅವರಿಗೆ ಸರ್ಟಿಫಿಕೇಟ್ ಕೊಡ್ತಾರೆ. ಚಿತ್ರದುರ್ಗದ ಜನತೆಗೆ ಈಗ ಅವಕಾಶ ಬಂದಿದೆ ಕಾಂಗ್ರೆಸ್ ಸರ್ಕಾರವನ್ನು ಸೋಲಿಸಬೇಕಿದೆ. ಕಾಂಗ್ರೆಸ್ ಸರ್ಕಾರ ಕ್ಲೀನ್ ಸ್ವೀಪ್ ಮಾಡಬೇಕಿದೆ ಎಂದಿದ್ದಾರೆ.

One thought on “ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ನಿಮ್ಮ ಹಾಸಿಗೆ ಮೇಲೂ ಕಣ್ಣು ಹಾಕ್ತಾರೆ ಹುಷಾರ್‌…!

Leave a Reply

Your email address will not be published.

Social Media Auto Publish Powered By : XYZScripts.com