ಮೋದಿನ ಪ್ರಶ್ನಿಸೋ ದಮ್‌ ಬಿಜೆಪಿಲಿ ಯಾವನಿಗೂ ಇಲ್ಲ, ಇದಕ್ಕೆ BSY ಪುತ್ರನೇ ಸಾಕ್ಷಿ : CM ಇಬ್ರಾಹಿಂ

ಯಾದಗಿರಿ : ಬಿಜೆಪಿಯ ಅನೇಕರಿಗೆ  ಟಿಕೆಟ್ ಕಟ್ಟಾಗಿ ನರ ಇಲ್ಲದಂತಾಗಿದೆ ಎಂದು ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಶಹಾಪುರ ಮತ ಕ್ಷೇತ್ರದ ಶರಣ ಬಸಪ್ಪ ದರ್ಶನಾಪುರ ಪರ ಪ್ರಚಾರಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಯಾರಿಗೂ ಮೋದಿಯನ್ನು ಪ್ರಶ್ನಿಸುವ ಶಕ್ತಿ ಇಲ್ಲ. ಅದಕ್ಕೆ ಯಡಿಯೂರಪ್ಪ ಪುತ್ರನೇ ಸಾಕ್ಷಿ ಎಂದಿದ್ದಾರೆ.

ಬಿಜೆಪಿಯಲ್ಲಿ 10 ಜನ ಲಿಂಗಾಯತರು ಇದ್ದರು. ಒಬ್ಬರಿಗೂ ಕೇಂದ್ರದ ಮಂತ್ರಿ ಸ್ಥಾನ ನೀಡಿಲ್ಲ. ಇನ್ನು ಶ್ರೀರಾಮುಲುನನ್ನು ಉಪ ಮುಖ್ಯಮಂತ್ರಿ ಮಾಡ್ತಾರಾ..? ಎಂದು ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿಗೆ ಭ್ರಮನಿರಸನವಾಗಿದೆ.  2019 ರ ಚುನಾವಣೆಯ ಸೋಲಿನ ಭೀತಿ ಶುರವಾಗಿದೆ. ಅದಕ್ಕೆ ಕರ್ನಾಟಕದಿಂದಲೆ ಗಂಟೆ ಬಾರಿಸುತ್ತೇವೆ ಎಂದಿದ್ದಾರೆ.

ಮೋದಿಗೆ ಚಾಣಕ್ಯ ನೀತಿ ಗೊತ್ತಿಲ್ಲ. ಚಾಣಕ್ಯ ನೀತಿಯನ್ನು ಓದಿ ತಿಳಿದುಕೊಳ್ಳಲಿ. ಚುನಾವಣೆಯಲ್ಲಿ ಗೆಲ್ಲುವ ತನಕ ಬಿಎಸ್ ವೈ ಮುಂದು ಗೆದ್ದ ಮೇಲೆ ಅನಂತಕುಮಾರ ಹೆಗಡೆ ಹಿಂದು, ಮುಂದು ಎಂದಿದ್ದಾರೆ. ದಲಿತ ಸಿಎಂ ವಿಚಾರ ಸಂಬಂಧ ಮಾತನಾಡಿದ ಅವರು, ಈಗ ಸಿಎಂ ಸಿದ್ದರಾಮಯ್ಯನವರ ಸಾರಥ್ಯ ನಡೆದಿದೆ. ನಂತರ ಎಲ್ಲರ ಪಾಳಿ ಶುರವಾಗಲಿದೆ.  ಹೆಣ ಹೊರೋಕೆ (ಸರ್ಕಾರ ನಡೆಸೋಕೆ) ಹಿಂದಾದ್ರೇನು, ಮುಂದಾದ್ರೇನು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com