ರಾಹುಲ್‌ಗೆ ಚೀಟಿ ಇಲ್ಲದೆ 2 ನಿಮಿಷ ಮಾತಾಡಕ್ಕಾಗಲ್ವಂತೆ, ಇಂತ ವಿಚಾರ ಯಾರಿಗೆ ಬೇಕಾಗಿದೆ : ಯೋಗೇಂದ್ರ ಯಾದವ್‌

ಶಿವಮೊಗ್ಗ : ಪ್ರಧಾನ ಮಂತ್ರಿಯವರು ತಮ್ಮ ಭಾಷಣದಲ್ಲಿ ಜನರಿಗೆ ಬೇಕಾದ ವಿಚಾರಗಳನ್ನು ಬಿಟ್ಟು ಬೇಡವಾದ ವಿಚಾರಗಳನ್ನು ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿಗೆ ಚೀಟಿ ಇಲ್ಲದೆ 2 ನಿಮಿಷ ಮಾತನಾಡಲು ಸಾಧ್ಯವಾಗುವುದಿಲ್ಲ. ಈ ರೀತಿಯ ವಿಚಾರಗಳು ಯಾರಿಗೆ ಬೇಕಿದೆ ಎಂದು ಸ್ವರಾಜ್‌ ಇಂಡಿಯಾ  ಪಕ್ಷದ ಯೋಗೇಂದ್ರ ಯಾದವ್‌ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಪ್ರೆಸ್ ಟ್ರಸ್ಟ್ ಸಂವಾದದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚುನಾವಣೆಯಲ್ಲಿ ರೈತರ ಬಗ್ಗೆ ಮಾತನಾಡುತ್ತಿಲ್ಲ. ಕರ್ನಾಟಕದ ಯಾವ ಮಾರುಕಟ್ಟೆಯಲ್ಲಿ ಬೆಂಬಲ ದೂರೆಯುತ್ತಿಲ್ಲ.  ಕೇಂದ್ರ ಸರ್ಕಾರ ವರ್ಷಕ್ಕೆ 2 ಲಕ್ಷ ಉದ್ಯೋಗ ನೀಡುತ್ತೆವೆ ಎಂದು ಹೇಳಿ ಕೊಂಡಿತ್ತು, ಆದ್ರೆ ಎಷ್ಟು ಜನ ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಿದೆ ಎಂಬುದು ಗೂತ್ತಾಗುತ್ತಿಲ್ಲ. ಚುನಾವಣೆ ಕೇವಲ ರಾಜಕೀಯವಾಗಿ ಬಿಟ್ಟಿದೆ. ಚುನಾವಣೆಯಲ್ಲಿ ಹಣದ ಹೊಳೆ ಹರಿಸಲಾಗುತ್ತಿದೆ. ಚುನಾವಣೆಯ ನಂತ್ರ ಹಣಗಳಿಸುವುದೇ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸ್ವರಾಜ್ ಇಂಡಿಯಾ ಚುನಾವಣೆಗಾಗಿಯೇ ವಿಶೇಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ರಾಜ್ಯವನ್ನು ಬರದಿಂದ ಮುಕ್ತವನ್ನಾಗಿಸುವುದು. ರೈತರನ್ನು ಸಂಪೂರ್ಣವಾಗಿ ಸಾಲ ದಿಂದ ಮುಕ್ತವನ್ನಾಗಿಸುವುದು. ರಾಜ್ಯದಲ್ಲಿ ಹಿಂದು ಮುಸ್ಲಿ ಎಂದು ವಿಭಜನೆ ಮಾಡಲಾಗುತ್ತಿದೆ. ಇಬ್ಬರ ನಡುವೆ ಗಲಾಟೆಯನ್ನು ಹಬ್ಬಿಸಿ ಅದರ ಚುನಾವಣಾ ಲಾಭವನ್ನು ಪಡೆದು ಕೊಳ್ಳಲು ಯತ್ನ ನಡೆಸಲಾಗುತ್ತಿದೆ.ರಾಜ್ಯ ಚುನಾವಣೆಗಾಗಿ 11 ಜನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. 8 ಕಡೆ ಬೇರೆ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದೇವೆ. ರಾಜ್ಯದಲ್ಲಿ ಹೊಸ ರೀತಿಯ ಪ್ರಯೋಗ ಮಾಡಲಾಗಿದೆ. ಚುನಾವಣೆಯ ನಂತ್ರ ಕೋಮುವಾದ ರಹಿತ ಸರ್ಕಾರಕ್ಕೆ ಬೆಂಬಲ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com