HDK ಜೊತೆ ರೆಬೆಲ್‌ ಸ್ಟಾರ್‌ ಮಾತುಕತೆ : ಜೆಡಿಎಸ್‌ಗೆ ಸೇರ್ಪಡೆಯಾಗ್ತಾರಾ ಅಂಬರೀಶ್‌ ?

ಮಂಡ್ಯ : ಕಾಂಗ್ರೆಸ್‌ ವಿರುದ್ಧ ತಿರುಗಿಬಿದ್ದು, ಟಿಕೆಟ್ ಕೊಟ್ಟರೂ ಬೇಡ ಎಂದು ತಿರಸ್ಕರಿಸಿದ್ದ ರೆಬೆಲ್‌ ಸ್ಟಾರ್‌ ಅಂಬರೀಶ್ ಜೆಡಿಎಸ್‌ಗೆ ಸೇರ್ಪಡೆಯಾಗುವುದಾಗಿ ಹೇಳಲಾಗುತ್ತಿದೆ.

ಇಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಅಂಬರೀಶ್‌ ಅವರ ನಿವಾಸಕ್ಕೆ ತೆರಳಿದ್ದು, 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವನಾಗಿದ್ದಾಗ ಬಲವಂತವಾಗಿ ಖಾತೆ ತಪ್ಪಿಸಿ ಈಗ ನನಗೆ ಟಿಕೆಟ್ ಕೊಡಲು ಬಂದಿದ್ದಾರೆ.  ನನಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಎಚ್‌ಡಿಕೆ ಬಳಿ ಅಂಬರೀಶ್ ನೋವು ತೋಡಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇವರಿಬ್ಬರ ಭೇಟಿ ಭಾರೀ ಕುತೂಹಲ ಮೂಡಿಸಿದ್ದು, ಅಂಬರೀಶ್ ಜೆಡಿಎಸ್‌ ಸೇರ್ಪಡೆಯಾದರೆ ಮಂಡ್ಯ ಕಾಂಗ್ರೆಸ್‌ಗೆ ಭಾರೀ ಹೊಡೆತ ಬೀಳಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com