ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಭಾರತೀಯ ಇಂಜಿನಿಯರ್‌ಗಳ ಅಪಹರಣ !

ಕಾಬುಲ್‌ : ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಏಳು ಮಂದಿ ಇಂಜಿನಿಯರ್‌ಗಳನ್ನು ದುಷ್ಕರ್ಮಿಗಳು ಅಪಹರಿಸಿರುವುದಾಗಿ ತಿಳಿದುಬಂದಿದೆ.

ಇವರೆಲ್ಲರೂ ಉತ್ತರ ಬಾಗ್ಲಾನ್ ಪ್ರಾಂತ್ಯದ ಪವರ್‌ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಸರ್ಕಾರ ಈ ಕುರಿತು ಸದ್ಯಕ್ಕೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

ಸರ್ಕಾರಿ ಒಡೆತನದ ಪವರ್‌ ಪ್ಲಾಂಟ್‌ನ ಕೆಲಸಕ್ಕೆಂದು ಮಿನಿಬಸ್‌ನಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತ ಗನ್‌ಮ್ಯಾನ್‌ ಗಳು ಡ್ರೈವರ್‌ ಸೇರಿದಂತೆ ಏಳು ಮಂದಿಯನ್ನು ಅಪಹರಿಸಿರುವುದಾಗಿ ಪೊಲೀಸ್‌ ಮೂಲಗಳು ಹೇಳಿವೆ. ಇದರಲ್ಲಿ ಓರ್ವ ಅಫ್ಘಾನಿಸ್ತಾನ ಉದ್ಯೋಗಿಯೂ ಇರುವುದಾಗಿ ಹೇಳಲಾಗಿದೆ. ತಾಲಿಬಾನ್‌ ಉಗ್ರ ಸಂಘಟನೆ ಅಪಹರಣ ಮಾಡಿರಬಹುದು ಎಂದು ಹೇಳಲಾಗಿದ್ದು, ಆದರೆ ಇದುವರೆಗೂ ಯಾವುದೇ ಉಗ್ರ ಸಂಘಟನೆ ಘಟನೆಯ ಹೊಣೆ ಹೊತ್ತಿಲ್ಲ.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com