ಕಾಂಗ್ರೆಸ್‌ನವರೇ ಮುಧೋಳ ನಾಯಿಯನ್ನಾದರೂ ನೋಡಿ ದೇಶಭಕ್ತಿ ಕಲಿಯಿರಿ : ಮೋದಿ

ಜಮಖಂಡಿ : ಪ್ರಧಾನಿ ಮೋದಿ ಇಂದು ಜಮಖಂಡಿಯಲ್ಲಿ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ನಾಯಕರ ವಿರುದ್ದ ಮಾತನಾಡಿದ ಅವರು, ಕಾಂಗ್ರೆಸ್ಸಿಗರಿಗೆ ದೇಶಭಕ್ತಿ ಇಲ್ಲ. ದೇಶವನ್ನು ಗೌರವಿಸೋ ರೀತಿ ಗೊತ್ತಿಲ್ಲ. ಮುಧೋಳ ನಾಯಿಯನ್ನಾದರೂ ನೋಡಿ ದೇಶಭಕ್ತಿ ಕಲಿಯಿರಿ ಎಂದು ಸಲಹೆ ನೀಡಿದ್ದಾರೆ.

ಕಾಂಗ್ರೆಸ್‌ ನಾಯಕರು ರಾಷ್ಟ್ರಾಭಿಮಾನವನ್ನು ಮರೆತುಬಿಟ್ಟಿದ್ದಾರೆ. ಜಮಖಂಡಿ ಹೋರಾಟಗಾರರ ನಾಡು. ಇಲ್ಲಿನ ಜನಕ್ಕೆ ದೇಶಕ್ಕೆ ಗೌರವ ಕೊಡುವ ರೀತಿ ಚೆನ್ನಾಗಿ ಗೊತ್ತು. ಆದರೆ ಇದು ಕಾಂಗ್ರೆಸ್ಸಿಗರಿಗೆ ಅರ್ಥವಾಗುವುದಿಲ್ಲ. ಕಾಂಗ್ರೆಸ್ಸಿಗರ ಮನಸ್ಥಿತಿಯಿಂದಾಗಿ ದೇಶಭಕ್ತಿಯ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ದೇಶಭಕ್ತಿಯನ್ನು ಪ್ರಶ್ನೆ ಮಾಡುತ್ತಿರುವ ಕಾಂಗ್ರೆಸ್‌ ದೇಶಕ್ಕೆ ಮಾರಕ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶಭಕ್ತಿಯಿಂದಾಗಿಯೇ ನಾವಿಂದು ಸ್ವಾತಂತ್ರ್ಯ ಪಡೆದಿದ್ದೇವೆ. ಇದೇ ದೇಶಭಕ್ತಿಯ ಆಧಾರದ ಮೇಲೆ ಅಭಿವೃದ್ಧಿಯನ್ನೂ ಕಾಣಬೇಕಾಗಿದೆ. ಸರ್ಜಿಕಲ್‌ ಸ್ಟ್ರೈಕ್ ಆದಾಗ ನನ್ನ ಸೈನಿಕರನ್ನೇ ಕಾಂಗ್ರೆಸ್‌ನವರು ಅವಮಾನಿಸಿದರು. ಕಾಂಗ್ರೆಸ್‌ಗೆ ಅವರ ಹಿರಿಯರು ದೇಶಭಕ್ತಿ ಕಲಿಸಿಲ್ಲ. ಈಗ ಮುಧೋಳ ನಾಯಿಗಳೂ ದೇಶಕಾಯುವ ಕೆಲಸಕ್ಕೆ ಸಿದ್ಧವಾಗುತ್ತಿವೆ. ಅವುಗಳದ್ದೇ ಬೆಟಾಲಿಯನ್‌ ಸಹ ಗಡಿಯಲ್ಲಿದೆ. ಅವುಗಳನ್ನು ನೋಡಿಯಾದರೂ ಕಾಂಗ್ರೆಸ್‌ನವರು ಬುದ್ದಿ ಕಲಿಯಲಿ ಎಂದು ಕಿಡಿ ಕಾರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com