ಪಕೋಡಾ ಮಾರಿ ಅಂತ ಹೇಳೋಕೆ ಪ್ರಧಾನಿನೇ ಬೇಕಾ ? : ಸಚಿವ H ಆಂಜನೇಯ ಪ್ರಶ್ನೆ

ಚಿತ್ರದುರ್ಗ : ಕಪ್ಪುಹಣ ತಂದು ಪ್ರತಿಯೊಬ್ಬರ ಅಕೌಂಟಿಗೆ ಹದಿನೈದು ಲಕ್ಷ ಹಾಕ್ತೀವಿ ಅಂದ್ರು. ಒಂದು ಪೈಸೆನೂ ಹಾಕಿಲ್ಲ. ಪಕೋಡ ಮಾರಿ ಅಂತಾ ಹೇಳುವುದಕ್ಕೆ ಪ್ರಧಾನಿಯೇ ಬೇಕಾಗಿಲ್ಲ. ನನ್ನ ಅವಧಿಯಲ್ಲಿ ನೂರಾರು ಕೋಟಿವೆಚ್ಚದಲ್ಲಿ ನೀರಾವರಿ ಯೋಜನೆಯನ್ನು ಹೊಳಲ್ಕೆರೆಗೆ ತಂದಿದ್ದೇನೆ. ಬಿಜೆಪಿಯವರು ಅನಗತ್ಯವಾಗಿ ತಂಟೆ ತಕರಾರುಗಳನ್ನು ತೆಗೆಯುತ್ತಿದ್ದಾರೆ ಎಂದು ಸಚಿವ ಆಂಜನೇಯ ಆರೋಪಿಸಿದ್ದಾರೆ.

ನನ್ನ ವಿರುದ್ಧ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಇಂದು ಪ್ರಧಾನಿಗಳು ಮಾತಾಡಿರುವುದು ಅವರ ಘನತೆಗೆ ತಕ್ಕುದಲ್ಲ. ಅವರು ಮಾಡಿರುವ ಆರೋಪ ಸಾಬೀತು ಮಾಡಿದ್ರೆ ನನ್ನನ್ನು ನೇಣಿಗೇರಿಸಲಿ. ಪ್ರಧಾನಿಗಳು ಆಧಾರ ರಹಿತವಾದ ಅಪಾದನೆ ಮಾಡಬಾರದು. ಅದು ಅವರ ಸ್ಥಾನಕ್ಕೆ ತಕ್ಕುದಲ್ಲ. ಬೆಡ್ ಶೀಟ್, ತಟ್ಟೆಯಲ್ಲಿ ನಡೆದ ಅಕ್ರಮವನ್ನು ಬಯಲು ಮಾಡಿದ್ದೇ ನಾನು. ಗಂಗಾ ಕಲ್ಯಾಣದಲ್ಲಿ ಅಕ್ರಮ ನಡೆದಿದೆ ಎಂದಿದ್ದಾರೆ. ತಾಕತ್ ಇದ್ದರೆ ಮೋದಿಯವರು ಸಾಬೀತು ಮಾಡಲಿ. ಅವರು ದೇಶದ ಪ್ರಧಾನಿಗಳು, ಬೇಕಾದರೆ ತನಿಖೆ ಮಾಡಿಸಲಿ. ಎಲ್ಲಾ ತನಿಖೆಗೂ ನಾನು ಸಿದ್ದ ಎಂದಿದ್ದಾರೆ.

One thought on “ಪಕೋಡಾ ಮಾರಿ ಅಂತ ಹೇಳೋಕೆ ಪ್ರಧಾನಿನೇ ಬೇಕಾ ? : ಸಚಿವ H ಆಂಜನೇಯ ಪ್ರಶ್ನೆ

Leave a Reply

Your email address will not be published.

Social Media Auto Publish Powered By : XYZScripts.com