ದೇವೇಗೌಡರ ಶಕ್ತಿ ಬಗ್ಗೆ ಮಾತಾಡ್ತೀರೇನ್ರೀ…ಮೇ 15ಕ್ಕೆ ನಿಮಗೇ ಗೊತ್ತಾಗುತ್ತೆ ನೋಡ್ತಾಯಿರಿ : HDK

ಚಿಕ್ಕಮಗಳೂರು : ಈ ಭೂಮಿ ಮೇಲೆ ಸಿದ್ದರಾಮಯ್ಯ ಒಬ್ಬರೇ ಸತ್ಯಹರಿಶ್ಚಂದ್ರರು, ಉಳಿದವರೆಲ್ಲಾ ಸುಳ್ಳುಗಾರರು, ಯಾಕಂದ್ರೆ, ಸತ್ಯಹರಿಶ್ಚಂದ್ರ ಕಾಡಿಗೆ ಹೋಗುವಾಗ ಸಿದ್ದರಾಮನ ಹುಂಡಿಯನ್ನು ಇವರ ಮನೆಯ ಹಿತ್ತಲಲ್ಲೇ ಇಟ್ಟು ಹೋಗಿದ್ದರು ಅನ್ಸುತ್ತೆ. ಅದಕ್ಕೆ ಅವರನ್ನೇ ಫಾಲೋ ಮಾಡಿರೋ ಸಿಎಂ ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರಾಗಿದ್ದಾರೆ, ನಾವೆಲ್ಲಾ ಸುಳ್ಳುಗಾರರಾಗಿದ್ದೇವೆಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರೋರು, ಮಾತಿನ ಬಗ್ಗೆ ಮೇಲೆ ನಿಗಾ ಇಟ್ಕೊಂಡು ಮಾತನಾಡಬೇಕು. ನಾನು ಏನ್ ಸುಳ್ಳು ಹೇಳಿದ್ದೇನೆ ಅನ್ನೋದನ್ನು ಜನತೆ ಮುಂದಿಡಬೇಕು, ಸುಳ್ ಹೇಳ್ಕೊಂಡು ರಾಜ್ಯದ ಜನತೆಗೆ ಮೋಸ-ದ್ರೋಹ ಮಾಡ್ಕೊಂಡು, ಅಕ್ರಮ ಹಣ ಸಂಪಾದನೆ ಮಾಡಿರೋದು ಸಿದ್ದರಾಮಯ್ಯ, ನಾನಲ್ಲ ಎಂದು ಸಿಎಂ ವಿರುದ್ಧ ಆಕ್ರೋಶ ಭರಿತರಾಗಿದ್ದಾರೆ.

ಇದೇ ವೇಳೆ, ದೇವೇಗೌಡ ನನ್ನನ್ನ ಬೆಳೆಸಿದ್ನಾ, ನಾವೆಲ್ಲಾ ಪಕ್ಷ ಕಟ್ಟಿದ್ದಕ್ಕೆ ಇವರು ಅಧಿಕಾರಕ್ಕೆ ಬಂದದ್ದು, ನನ್ನನ್ನ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಹಾಗೂ ಸಚಿವನನ್ನಾಗಿ ಮಾಡಿದ್ದು ರಾಮಕೃಷ್ಣ ಹೆಗಡೆ ಎಂಬ ಸಿಎಂ ಹೇಳಿಕೆಗೂ ಹೆಚ್ಡಿಕೆ ತಿರುಗೇಟು ನೀಡಿದ್ದಾರೆ. ದೇವೇಗೌಡರ ಶಕ್ತಿ ಏನು ಅನ್ನೋದನ್ನು ಮೇ 15 ತಾರೀಖು ರಾಜ್ಯದ ಜನ ತೋರಿಸ್ತಾರೆ. ಆವತ್ತು ದೇವೇಗೌಡರು ಸಿದ್ದರಾಮಯ್ಯನಿಗೆ ಏನ್ ಕಾಂಟ್ರಿಬ್ಯೂಷನ್ ಕೊಟ್ರು ಅನ್ನೋದನ್ನು ಸಿಂಧ್ಯಾ ಇನ್ನು ಬದುಕಿದ್ದಾರಲ್ಲ ಅವರನ್ನ ಕೇಳಿ ಅಥವ ಸಿಂಧ್ಯಾ ಬಿಟ್ಟು ಬೇರೆ ಯಾರಾದ್ರು ಬದುಕಿದ್ರು ಅವರನ್ನೂ ಕೇಳಿ ಎಂದು ಸಿಎಂ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

One thought on “ದೇವೇಗೌಡರ ಶಕ್ತಿ ಬಗ್ಗೆ ಮಾತಾಡ್ತೀರೇನ್ರೀ…ಮೇ 15ಕ್ಕೆ ನಿಮಗೇ ಗೊತ್ತಾಗುತ್ತೆ ನೋಡ್ತಾಯಿರಿ : HDK

Leave a Reply

Your email address will not be published.

Social Media Auto Publish Powered By : XYZScripts.com