ವಿಜಯಪುರ…ಮೇ 8…. ಹೈವೋಲ್ಟೇಜ್‌ ಪ್ರಚಾರಕ್ಕೆ ಶುರುವಾಗಿದೆ ಕೌಂಟ್‌ ಡೌನ್‌….

ಬೆಂಗಳೂರು : ಇದೇ ತಿಂಗಳ ಮೇ 8 ರಂದು ವಿಜಯಪುರ ಜಿಲ್ಲೆ ಹೈವೋಲ್ಟೇಜ್ ಪ್ರಚಾರಕ್ಕೆ ಸಾಕ್ಷಿಯಾಗಲಿದೆ. 8 ರಂದೇ ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಚುನಾವಣಾ ಪ್ರಚಾರಕ್ಕೆ ಆಗಮಿಸಲಿದ್ದಾರೆ.

ಮೇ 8 ರಂದು ಸೋನಿಯಾ ಗಾಂಧಿ ಭಾಗಿಯಾಗುವ ಕಾರ್ಯಕ್ರಮಕ್ಕೆ ಸಿದ್ದತೆಗಳು ನಡೆದಿವೆ ಎಂದು ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಹೇಳಿದರು. ಎಐಸಿಸಿ ಕಾರ್ಯದರ್ಶಿ ಮಾಣಿಕ್ಯಂ ಟಾಗೋರ್ ಹಾಗೂ ಎಂ ಬಿ ಪಾಟೀಲ್ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು. ನಗರದ ಬಿಎಲ್ಡಿಇ ಸಂಸ್ಥೆಯ ನೂತನ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎರಡೂವರೆ ಲಕ್ಷ ಜನರು ಭಾಗಿಯಾಗಲಿದ್ದಾರೆ ಎಂದು ಸಚಿವ ಪಾಟೀಲ್ ಹೇಳಿದರು.

2016 ರ ಬಳಿಕ ಇದೇ ಮೊದಲ ಬಾರಿಗೆ ಸೋನಿಯಾಗಾಂಧಿ ಅವರು ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಸ್ವತಃ ಸೋನಿಯಾಗಾಂಧಿ ಅವರೇ ವಿಜಯಪುರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮಾಣಿಕ್ಯಂ ಟಾಗೋರ್ ಹೇಳಿದರು.  ಇದೇ ವೇಳೆ ಕಳೆದ ಬಾರಿ ಗದಗ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಹಾದಾಯಿ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿದ್ದಕ್ಕೆ ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ತೀವ್ರವಾಗಿ ಖಂಡಿಸಿದರು. ವಿಧಾನಸಭಾ ಚುನಾವಣೆ ವೇಳೆ ಪ್ರಧಾನಿ ಅವರಿಗೆ ಮಹಾದಾಯಿ ನೆನಪಾಗಿದೆ. ನಾವು ವಿರೋಧ ಪಕ್ಷಗಳ ಸಹಿತ ನಿಯೋಗದಲ್ಲಿ ತೆರಳಿ ಮಹಾದಾಯಿ ಸಮಸ್ಯೆ ಬಗೆ ಹರಿಸಲು ಮನವಿ ಮಾಡಿಕೊಂಡ ವೇಳೆ ಮೌನವಾಗಿದ್ದರು. ಜನರಿಗೆ ಇವರ ಉದ್ದೇಶ ತಿಳಿದಿದೆ. ಇವರೆಲ್ಲರ ನಾಟಕ ಗೊತ್ತಾಗಿದೆ ಎಂದು ಕುಟುಕಿದರು. ಈಗಲೂ ಕಾಲ ಮಿಂಚಿಲ್ಲಾ ಪ್ರಧಾನಿ ಮೋದಿ ಅವರು ಮಹದಾಯಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿಕೊಂಡರು. ಈ ಹಿಂದೆ ಬಾಂಬೆ ಕ್ಲಬ್ ಮೋದಿ
ಪ್ರಚಾರದ ನೇತೃತ್ವ ವಹಿಸಿಕೊಂಡಿತ್ತು. ಆಗ ಆ ಕ್ಲಬ್ ಮೋದಿ ಅವರ ಪ್ರಚಾರಕ್ಕೆ ಎಷ್ಟು ಖರ್ಚು ಮಾಡಿತ್ತು ಎಂದು ಬಹಿರಂಗಪಡಿಸಿಲಿ ಎಂದು ಸವಾಲು ಹಾಕಿದರು.

ಇದೇ ವೇಳೆ ಮಾತನಾಡಿದ ಸಚಿವ ಪಾಟೀಲ್ ನಾವೇನು ಮೋದಿ ಅವರಿಗೆ ಹೆದರಿ, ಸೋನಿಯಾಗಾಂಧಿ ಅವರ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಮೋದಿ ಅವರೇ ಸೋನಿಯಾಗಾಂಧಿಗೆ ಹೆದರಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು. ಪ್ರದಾನಿ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮ ಬಬಲೇಶ್ವರ ಕ್ಷೇತ್ರದಲ್ಲಿ ಬರುತ್ತಿದೆ. ಇದರಿಂದ ನನಗೂ ಗೌರವ ಹೆಚ್ಚಾಗುತ್ತದೆ. ನನ್ನ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಪ್ರಚಾರ ಮಾಡಿದರೂ ಮತದಾರರು ನನಗೆ ಆಶಿರ್ವಾದ ಮಾಡುತ್ತಾರೆ ಎಂದರು. ಜೊತೆಗೆ ಇಂದು ಬಬಲೇಶ್ವರ ಕ್ಷೇತ್ರದಲ್ಲಿ ನಟ ಯಶ್ ಪ್ರಚಾರ ಮಾಡುತ್ತಿರುವ ಬಗ್ಗೆ ಮಾತನಾಡಿದರು. ಯಶ್ ಹಾಗೂ ನನ್ನ ಮಧ್ಯೆ ಸ್ನೇಹವಿದೆ. ವೃಕ್ಷೋತ್ಥಾನ ಪ್ರತಿಷ್ಟಾನದ ರಾಯಭಾರಿ ಯಶ್ ಆಗಿದ್ದಾರೆ. ಆದ ಕಾರಣ ನಮ್ಮ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ದಿ ಕೆಲಸ ಕಾಮಗಾರಿ ಕಂಡ ಯಶ್ ನನ್ನ ಪರವಾಗಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ಹಾಗೂ ಕಾರ್ನರ್ ಮೀಟಿಂಗ್ ಮಾಡಲಿದ್ದಾರೆ. ಜೊತೆಗೆ ನೆರೆಯ ಬದಾಮಿಯಲ್ಲಿ ಯಶ್ ಶ್ರೀರಾಮುಲು ಪರ ಪ್ರಚಾರ ಮಾಡುವುದಿಲ್ಲ. ಇದನ್ನು ದೂರವಾಣಿಯಲ್ಲಿ ಸ್ವತಃ ಯಶ್ ಅವರೇ ಸ್ಪಷ್ಟಪಡಿಸಿದ್ದಾರೆ. ಯಶ್ ಶ್ರೀರಾಮುಲು ಪರ ಪ್ರಚಾರ ಮಾಡುತ್ತಾರೆ ಎಂಬುದು ಕೆಲವರು ಹಬ್ಬಿಸಿದ ಸುಳ್ಳು ಸುದ್ದಿ ಎಂದು ಹೇಳಿದರು.

One thought on “ವಿಜಯಪುರ…ಮೇ 8…. ಹೈವೋಲ್ಟೇಜ್‌ ಪ್ರಚಾರಕ್ಕೆ ಶುರುವಾಗಿದೆ ಕೌಂಟ್‌ ಡೌನ್‌….

Leave a Reply

Your email address will not be published.