BJP ಅಭ್ಯರ್ಥಿ ಪರ ಕಿಚ್ಚನ ಕ್ಯಾಂಪೇನ್‌ : ಶ್ರೀರಾಮುಲು ವಿರುದ್ಧ ಪ್ರಚಾರ ಮಾಡ್ತೀರಾ ಅಂದಿದ್ದಕ್ಕೆ ಸುದೀಪ್‌ ಹೇಳಿದ್ದೇನು ?

ಸುರಪುರ : ಬಿಸಿಲನ್ನು ಲೆಕ್ಕಿಸದೆ ನಟ ಸುದೀಪ್ ಹಾಗೂ ನಟಿ ತಾರಾ ಅವರು ಯಾದಗಿರಿಯ ಸುರಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕಕ್ಕೇರಾ ಪಟ್ಟಣದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಸುರಪುರ ಬಿಜೆಪಿ ಅಭ್ಯರ್ಥಿ ರಾಜುಗೌಡ ಪರ ಕಕ್ಕೇರಾ ಪಟ್ಟಣದಲ್ಲಿ ರೋಡ್ ಶೋ ನಡೆಸಿ ರಾಜುಗೌಡ ಪರ ಪ್ರಚಾರ ನಡೆಸಿದ್ರು.ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ರಾಜುಗೌಡ ಅವರನ್ನು ಗೆಲ್ಲಿಸಿ ಅವರು ಅಭಿವೃದ್ಧಿ ಮಾಡದಿದ್ದರೆ ನನ್ನ ಹತ್ತಿರ ಬನ್ನಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಕಿಚ್ಚ ಸುದೀಪ್ ನೋಡಲು ರಸ್ತೆಯುದ್ದಕ್ಕು ಜನ ಮುಗಿ ಬಿದ್ದಿದ್ದರು.

ಇದೇ ವೇಳೆ ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಪ್ರಚಾ ಮಾಡುವ ವಿಚಾರ ಸಂಬಂಧ ಮಾತನಾಡಿದ ಕಿಚ್ಚ, ರಾಮುಲು ನನ್ನ ಸಹೋದರನಿದ್ದಂತೆ. ನಾನ್ಯಾಕೆ ಅವರ ವಿರುದ್ದ ಪ್ರಚಾರ ಮಾಡಲಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ. ಇನ್ನು ಚಾಮುಂಡೇಶ್ವರಿಯಲ್ಲಿ ಪ್ರಚಾರ ಮಾಡುವ  ಸಂಬಂಧ ಸಿದ್ದರಾಮಯ್ಯ ನನ್ನನ್ನು ಕೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com