ಬಿಜೆಪಿ ಪರ ರಾಕಿಂಗ್‌ ಪ್ರಚಾರ : ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿಗಾಗಿ ಯಶ್‌ ಮತಯಾಚನೆ

ಶಿರಸಿ : ಈ ಬಾರಿ ಚುನಾವಣೆಯಲ್ಲಿ  ಸ್ಟಾರ್‌ಗಳ ಪ್ರಚಾರದ ಭರಾಟೆ ಜೋರಾಗಿದೆ. ಒಬ್ಬೊಬ್ಬ ಸಿನಿಮಾ ಕಲಾವಿದರೂ ಒಂದೊಂದು ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ.

ಅಂತೆಯೇ ನಾನು ಯಾವ ಪಕ್ಷಕ್ಕೂ ಸೇರಲ್ಲ. ಆದರೆ ಉತ್ತಮವಾಗಿ ಕೆಲಸ ಮಾಡಿದವರ ಪರ ಪ್ರಚಾರ ಮಾಡುತ್ತೇನೆ ಎಂದಿದ್ದ ಯಶ್‌ ಇಂದು ಶಿರಸಿಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಸಿದ್ದಾಪುರದ ಪ್ರಮುಖ ರಸ್ತೆಗಳಲ್ಲಿ  ಪ್ರಚಾರ ಮಾಡಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಬೆಂಬಲಿಸಿ, ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವಂತೆ  ಕರೆ ನೀಡಿದರು. ಪಕ್ಷಕ್ಕಿಂತ ವ್ಯಕ್ತಿ ಮುಖ್ಯ.  ಆದ್ದರಿಂದ ನನಗೆ ಇಷ್ಟವಾದ ವ್ಯಕ್ತಿಗಳ ಪರ ನಾನು ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com