ಬೆಂಗಳೂರು : ಕಚೇರಿಗೆ ಬೀಗ ಜಡಿದು BBMP ನಿರ್ಲಕ್ಷ್ಯ : ವೋಟರ್ ಐಡಿಗಾಗಿ ಜನರ ಅಲೆದಾಟ..!

ಮೇ 12 ರಂದು ಕರ್ನಾಟಕ ರಾಜ್ಯದ್ಯಂತ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಇನ್ನು ಒಂದು ವಾರವಷ್ಟೇ ಸಮಯ ಉಳಿದಿದೆ. ನೆಚ್ಚಿನ ಪ್ರತಿನಿಧಿಯನ್ನು ಆಯ್ಕೆ ಮಾಡಲು, ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಮೊದಲ ಬಾರಿಗೆ ಚಲಾಯಿಸಲು ಯುವಕ, ಯುವತಿಯರು ಉತ್ಸುಕರಾಗಿದ್ದಾರೆ.

ಆದರೆ ರಾಜಧಾನಿ ಬೆಂಗಳೂರಿನ ಸಂಜಯನಗರದ ಬಡಾವಣೆಯಲ್ಲಿ ಇದುವರೆಗೆ ಹಲವು ಜನರಿಗೆ ವೋಟರ್ ಐಡಿ ದೊರೆತಿಲ್ಲ. ವೋಟರ್ ಐಡಿ ಪಡೆಯಲು ಜನ ಬಿಬಿಎಂಪಿ ಕಚೇರಿಗೆ ತೆರಳಿದಾಗ, ಸಂಬಂಧಪಟ್ಟ ಅಧಿಕಾರಿಗಳು ಕಚೇರಿಗೆ ಬೀಗ ಜಡಿದು ನಿರ್ಲಕ್ಷ್ಯ ತೋರಿದ್ದಾರೆ.

ಸಂಜಯ ನಗರದ ಬಡಾವಣೆಯ ಬಿಬಿಎಂಪಿ ಕಚೇರಿಗೆ ಜನ ಭೇಟಿ ನೀಡಿ ವೋಟರ್ ಐಡಿ ಇಲ್ಲದೆ ಮರಳಿ ಹೋಗುತ್ತಿದ್ದು, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸ್ಥಳದಲ್ಲಿ ಬಿಬಿಎಂಪಿ ಪರವಾಗಿ ಯಾರೂ ಹೇಳುವವರು, ಕೇಳುವವರು ಇಲ್ಲದಂತಾಗಿದೆ.

ಕಚೇರಿಯ ಗೋಡೆಯ ಮೇಲೆ ಸೂಚನಾ ಪತ್ರಗಳನ್ನು ಅಂಟಿಸಲಾಗಿದ್ದು, ವೋಟರ್ ಐಡಿ ಪಡೆಯಲು ಬೇರೆ ಸ್ಥಳಗಳ ಹೋಗುವಂತೆ ನಿರ್ದೇಶಿಸಲಾಗಿದೆ. ವಿಳಾಸವನ್ನು ಇಂಗ್ಲೀಷಿನಲ್ಲಿ ಬರೆಯಲಾಗಿದ್ದು, ಇಂಗ್ಲೀಷ್ ಓದಲು ಬಾರದ ಕೆಲವು ಜನ ತಮ್ಮ ವೋಟರ್ ಐಡಿ ಪಡೆಯಲು, ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಗೊಂದಲದಲ್ಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com