ಮುಂದುವರಿದ ಪಕ್ಷಾಂತರ ಪರ್ವ : ಬಿಜೆಪಿ, ಜೆಡಿಎಸ್‌ ತೊರೆದು ಕೈ ಹಿಡಿದ 25ಕ್ಕೂ ಹೆಚ್ಚು ಕಾರ್ಯಕರ್ತರು !

ಸಕಲೇಶಪುರ : ಜಿಲ್ಲಾ ಬಿಜೆಪಿಯಿಂದ ಬೇಸತ್ತ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಇಂದು ಸಕಲೇಶಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ದೇವಪ್ಪ ಮಲ್ಲಿಗೆವಾಳು, ಜೆಡಿಎಸ್ ನ ಕುಮಾರಶೆಟ್ಟಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಜಾವಗಲ್ ಮಂಜುನಾಥ್, ಮಾಜಿ ಎಂ.ಎಲ್.ಸಿ. ಎಸ್.ಎಂ.ಆನಂದ್, ಸಮ್ಮುಖದಲ್ಲಿ 25ಕ್ಕೂ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ್ರು. ಇಂದು ಭಾರತೀಯ ಜನತಾಪಾರ್ಟಿಯಲ್ಲಿ  ಸಚ್ಚಾರಿತ್ರ್ಯ ಎಂಬುದು ಉಳಿದಿಲ್ಲ. ಪುಂಡ ಪೋಕರಿಗಳಿಗೆ, ಮಣೆ ಹಾಕುತ್ತಿದೆ. ಸಕಲೇಶಪುರದಲ್ಲಿಸ 65 ಸಾವಿರ ದಲಿತ ಮತಗಳಿವೆ. ಈ ಕ್ಷೇತ್ರದ ಅಭ್ಯರ್ಥಿಯಾಗಿರೋ ಬಿಜೆಪಿಯ ನಾರ್ವೆ ಸೋಮಶೇಖರ್ ಮೇಲೆ ಹಲವು ರೌಡಿ ಶೀಟರ್ ಪ್ರಕರಣಗಳಿವೆ. ಅಂತಹವರಿಗೆ ಮಣೆಹಾಕಿದ್ದು, ನಮಗೆ ಸಹಿಸಿಕೊಳ್ಳಲಾಗಲಿಲ್ಲ. ಹಾಗಾಗಿ ರಾಷ್ಟ್ರ ಮಟ್ಟದ ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನ ಸೇರಿದ್ದೇವೆ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com