ಮತೀಯ ರಾಜಕಾರಣದ ಕೈಗೆ ಆಳುವ ಅವಕಾಶ ಕೊಡುತ್ತಾರಾ ಮತದಾರ…..?

ನಾ ಕಂಡಂತೆ ಕರ್ನಾಟಕದ ಚುನಾವಣೆ ಎಂದೂ ಹೀಗೆ ಯುದ್ಧಗ್ರಸ್ತವಾಗಿದ್ದಿಲ್ಲ. ಚುನಾವಣೆಗಳಲ್ಲಿ ಸಹಜವಾಗಿ ಪಕ್ಷಗಳ ವಿಚಾರ ಸಿದ್ಧಾಂತ ಕಾರ್ಯಕ್ರಮ ಮುನ್ನೋಟಗಳ ಮಂಡನೆಯಾಗುತ್ತದೆ; ಬಿಸಿಬಿಸಿ ವಾದ ಪ್ರತಿವಾದಗಳು ಮುಖಾಮುಖಿ ಆಗುತ್ತವೆ.

ಶಕ್ತಿರಾಜಕಾರಣದಲ್ಲಿರುವ ಇತರೆ ಪಕ್ಷಗಳಲ್ಲಿ ಹತ್ತಾರು ಸಮಸ್ಯೆಯಿವೆ; ಆದರೂ ಯಾಕೆ ದಲಿತರು, ಮುಸ್ಲಿಮರು, ಮಹಿಳೆಯರು, ಲೇಖಕರು, ಕಲಾವಿದರು, ಮೇಲ್ಜಾತಿಯಲ್ಲಿರುವ ಪ್ರಜಾತಂತ್ರವಾದಿ ಮನಸ್ಸಿನವರು, ಅವನ್ನು ಬೆಂಬಲಿಸುವ ಅನಿವಾರ್ಯತೆಗೆ ದೂಡಲ್ಪಡುತ್ತಾರೆ? ಮತೀಯವಾದಿ ಪಕ್ಷಗಳ ಆಳಿಕೆಗೆ ಒಳಗೇ ಅಂಜುತ್ತಾರೆ? ಕಾರಣವಿಷ್ಟೆ- ಅದು ಜನ ನಿತ್ಯಬದುಕಿನಲ್ಲಿ ತಿನ್ನುವ ಕುಡಿವ ಉಡುವ ಪ್ರೇಮಿಸುವ ಬರೆಯುವ ಮಾತಾಡುವ ಸಹಜ ಸ್ವಾತಂತ್ರ್ಯಗಳನ್ನು ಕಸಿಯುತ್ತದೆ; ಹಸಿವು ನಿರುದ್ಯೋಗ ಬಡತನಗಳಂತಹ ಬುನಾದಿ ಪ್ರಶ್ನೆಗಳ ಬಗ್ಗೆ ಕಳವಳಿಸುವುದಿಲ್ಲ; ಭಿನ್ನಮತಗಳನ್ನು ಹಿಂಸಾತ್ಮಕವಾಗಿ ಬಗೆಹರಿಸಲು ಯತ್ನಿಸುತ್ತದೆ; ಸಾವನ್ನು ಸಂಭ್ರಮಿಸುತ್ತದೆ. ಆದ್ದರಿಂದಲೇ ಭಾರತದಲ್ಲಿ ಚುನಾವಣೆ ಎನ್ನುವುದು ದಮನಿತ ಸಮುದಾಯಗಳಿಗೆ `ಅಸ್ತಿತ್ವ’ ಉಳಿಸಿಕೊಳ್ಳುವ ಅವಕಾಶವಾದರೆ; ಬಲಿಷ್ಠರಿಗೆ ತಮ್ಮ `ಹಿತಾಸಕ್ತಿ’ ಯಜಮಾನಿಕೆ ರಕ್ಷಿಸಿಕೊಳ್ಳುವ ಅವಕಾಶ. ಈಗಿರುವ ವಾತಾವರಣ ಕಂಡರೆ, ಕರ್ನಾಟಕದ ಜನ ಮತೀಯ ರಾಜಕಾರಣದ ಕೈಗೆ ಆಳುವ ಅವಕಾಶ ಕೊಡಲಿಕ್ಕಿಲ್ಲ ಎಂದೇ ನನಗನಿಸುತ್ತಿದೆ.

ರಹಮತ್‌ ತರೀಕೆರೆ ಅವರ ಫೇಸ್‌ಬುಕ್‌ ವಾಲ್‌ನಿಂದ…..

Leave a Reply

Your email address will not be published.

Social Media Auto Publish Powered By : XYZScripts.com