ಪ್ರತಿಭಟನೆಗೆ ಜಗ್ಗದ ದರ್ಶನ್‌ರಿಂದ ಪ್ರಚಾರ : ಸಿದ್ದರಾಮಯ್ಯ ಡೇರ್‌ ಎಂಡ್‌ ಡೆವಿಲ್ ಎಂದ್ರು ಡಿ ಬಾಸ್‌

ಮೈಸೂರು : ಸಿಎಂ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿಂದು  ನಟ ದರ್ಶನ್‌ ಪ್ರಚಾರ ನಡೆಸಿದ್ದಾರೆ. ಈ ವೇಳೆ ದರ್ಶನ್‌ ಅವರಿಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಹ ಸಾಥ್‌ ನೀಡಿದ್ದಾರೆ.

ಚಾಮುಂಡೇಶ್ವರಿಯ ಹಳ್ಳಿಗಳಲ್ಲಿ ರೋಡ್‌ ಶೋ ನಡೆಸಿ ಮಾತನಾಡಿದ ದರ್ಶನ್‌, ಸಿದ್ದರಾಮಯ್ಯ ಪುತ್ರ ರಾಕೇಶ್‌ರನ್ನು ನೆನೆದಿದ್ದಾರೆ. ರಾಕೇಶ್‌ ಸಾವಿಗೀಡಾದ ಮೇಲೆ ಸಿದ್ದರಾಮಯ್ಯನವರನ್ನು ನೋಡಿದೆ. ಕೆಲವೇ ಸಮಯದಲ್ಲಿ ಅದರಿಂದ ಹೊರಬಂದು ಜನರಿಗಾಗಿ ಕೆಲಸ ಮಾಡಿದರು. ಮನುಷ್ಯನಿಗೆ ಕಷ್ಟ ಬರುವುದು ಸಹಜ. ಆದರೆ ಅದನ್ನು ಎದುರಿಸಬೇಕು ಎಂಬುದನ್ನು ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ.  ಆದ್ದರಿಂದ ಈ ಬಾರಿ ಸಿದ್ದರಾಮಯ್ಯ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಅವರು ಡೇರ್‌ ಎಂಡ್‌ ಡೆವಿಲ್‌. ಅವರನ್ನು ಗೆಲ್ಲಿಸಿ ಎಂದು ಮಾತ್ರ ನಾನು ಹೇಳಬಲ್ಲೆ ಎಂದಿದ್ದಾರೆ.

ಪ್ರಚಾರಕ್ಕೂ ಮುನ್ನ ದರ್ಶನ್‌ ಗ್ರಾಮಕ್ಕೆ ಬರದಂತೆ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ದರ್ಶನ್‌ ಅವರಿಗೆ ಧಿಕ್ಕಾರ ಕೂಗಿದ್ದರು. ಸಿದ್ದರಾಮಯ್ಯ 12 ವರ್ಷಗಳಿಂದ ನಮ್ಮ ಕ್ಷೇತ್ರವನ್ನು ಮರೆತಿದ್ದಾರೆ. ಅವರ ಅಧಿಕಾರಾವಧಿಯಲ್ಲಿ  ರೈತಪರ ಕೆಲಸಗಳು ನಡೆದಿಲ್ಲ. ಆದ್ದರಿಂದ ದರ್ಶನ್‌ ಸಿಎಂ ಪರ ಪ್ರಚಾರ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com