ಚುನಾವಣೆಗಾಗಿ ಕೊಲೆ ಆರೋಪಿಗಳ ಕೈ ಹಿಡಿದರಾ ಶಾಸಕ ಮೊಯಿನುದ್ದೀನ್ ಬಾವಾ…..!

ಮಂಗಳೂರು : ಕೊಲೆಯ ಪ್ರಮುಖ ಆರೋಪಿಗಳನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗಿದೆ ಎಂದು ಶಾಸಕ ಮೊಯಿನುದ್ದೀನ್‌ ಬಾವ ಮೇಲೆ ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಆರೋಪ ಮಾಡಿದ್ದಾರೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಯಿನುದ್ದೀನ್‌ ಬಾವಾ ಮೊನ್ನೆ ಮೊನ್ನೆ ಹಲವು ಯುವಕರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡರು. ಇದರಲ್ಲಿ ಬಿಜೈ ಮದ್ರಸದ ಮೌಲ್ವಿ ಕೊಲೆಯ ಪ್ರಮುಖ ಆರೋಪಿಗಳನ್ನು ಸೇರಿಸಿಕೊಳ್ಳಲಾಗಿದೆ ಎಂದು ತಮ್ಮ ಫೇಸ್ ಬುಕ್‌ನಲ್ಲಿ ಆರೋಪಿಸಿದ್ದಾರೆ. ಕೋಮುಸಂಘಟನೆಯ ಕಾರ್ಯಕರ್ತರು, ಕೊಲೆ ಸುಲಿಗೆ ಪ್ರಕರಣಗಳ ಆರೋಪ ಹೊತ್ತವರಾದ ಟಿಕ್ಕಿ ರವಿ, ಪದ್ದು ಮುಂತಾದವರನ್ನು ಬಾವ ಕಾಂಗ್ರೆಸ್ ಧ್ವಜಕೊಟ್ಟು, ಶಾಲು ಹೊದಿಸಿ ವೇದಿಕೆಯ ಮೇಲೆ ಬಿಗಿದಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿದ್ದಾರೆ. ಇದು ಅತ್ಯಂತ ನೀಚ ರಾಜಕಾರಣ, ಗೆಲುವಿಗಾಗಿ ಇಷ್ಟು ಕೆಳಮಟ್ಟಕ್ಕಿಳಿಯುವುದು ನನಗಂತು ತೀರಾ ಆಘಾತ ಉಂಟುಮಾಡಿದೆ ಎಂದಿದ್ದಾರೆ.

ಕೋಮವಾದದ ವಿರುದ್ದ ಮಾತಾಡುವ, ಅಲ್ಪಸಂಖ್ಯಾತರ ರಕ್ಷಕ, ಜಾತ್ಯಾತೀತತೆಯ ಗುತ್ತಿಗೆ ಫೋಸುಕೊಡುವ ಕಾಂಗ್ರೆಸ್ ಪಕ್ಷ, ಹಾಗೂ ಸಿದ್ದರಾಮಯ್ಯ ಮೊಯಿನುದ್ದೀನ್‌ ಬಾವರ ಈ ನಡವಳಿಕೆಯ ಕುರಿತು ಮಾತಾಡಲಿ,  ಬಾವರ ಮೇಲೆ ಕ್ರಮಕೈಗೊಳ್ಳಲಿ. ಇಲ್ಲವಾದರೆ ಜನತೆ ಚುನಾವಣೆಯಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ರಾಜಕಾರಣ ಎನ್ಜುವುದು ಸಮಾಜಘಾತುಕತನ ಆಗಬಾರದು ಮುನೀರ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com