ದರ್ಶನ್‌ ಪುಟ್ಟಣ್ಣಯ್ಯಗೆ ಇತರೆ ರಾಜ್ಯದ ರೈತರಿಂದಲೂ ಬೆಂಬಲ : ಯುವನಾಯಕನ ಪರ ಪ್ರಚಾರಕ್ಕಿಳಿದ ತಮಿಳಿಗರು

ಮಂಡ್ಯ : ಜನಾನುರಾಗಿ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದೆ.  ತಮಿಳುನಾಡಿನ ರೈತರೂ ದರ್ಶನ್‌ ಪುಟ್ಟಣ್ಣಯ್ಯ ಪರ ಅಖಾಡಕ್ಕಿಳಿದಿದ್ದು, 30ಕ್ಕೂ ಹೆಚ್ಚು ತಮಿಳುನಾಡು ರೈತರು ಪ್ರಚಾರ ಆರಂಭಿಸಿದ್ದಾರೆ.

ತಮಿಳುನಾಡಿನಿಂದ ಆಗಮಿಸಿರುವ ರೈತರು ಪಾಂಡವಪುರದಲ್ಲಿ ಬಿರುಸಿ ಪ್ರಚಾರ ಕೈಗೊಂಡಿದ್ದಾರೆ. ಪುಟ್ಟಣ್ಣಯ್ಯ ರೈತರ ಪರವಾಗಿ ದೇಶದ ಎಂಎಲ್‌ಎ ಆಗಿದ್ದವರು.  ಅವರು ಸತ್ತಾಗ ಇಡೀ ದೇಶದ ರೈತರು ಕಣ್ಣೀರಾಗಿದ್ದರು. ದೇಶದಲ್ಲಿ ರೈತರ ಪರ ಹೋರಾಡುತ್ತಿದ್ದ ಜೀವವನ್ನು ನಾವು ಕಳೆದುಕೊಂಡಿದ್ದೇವೆ. ಅದಕ್ಕಾಗಿ ನಮಗೆ ನೋವಾಗಿದೆ ಎಂದಿದ್ದಾರೆ.

ಪುಟ್ಟಣ್ಣಯ್ಯ ಸಾವಾದಾಗ ತಮಿಳುನಾಡಿನಿಂದ‌‌ ಮಣ್ಣು ತಂದು ಸಮಾಧಿಗೆ ಸಮರ್ಪಣೆ ಮಾಡಿದ್ದೆವು. ಅವರ ಮಗನನ್ನ ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿ. ದೇಶದ ರೈತರೆಲ್ಲರೂ ಒಂದೇ. ರೈತರಿಗೆ‌ ತಮಿಳುನಾಡು, ಕರ್ನಾಟಕ, ಕೇರಳ ಎಂಬ ಬೇಧವಿಲ್ಲ. ಈ ಕಾರಣಕ್ಕೆ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರಕ್ಕೆ ಆಗಮಿಸಿದ್ದೇವೆ. ಎಲ್ಲರೂ ಸೇರಿ ಅವರನ್ನು ಬೆಳೆಸೋಣ ಎಂದಿದ್ದಾರೆ.

 

Leave a Reply

Your email address will not be published.