ಈ ಮೋದಿ, ರಾಹುಲ್‌ ಗಾಂಧಿ ಇವರೆಲ್ಲ ಸೀಸನ್‌ ರಾಜಕಾರಣಿಗಳು : H.D ಕುಮಾರಸ್ವಾಮಿ

ಕೊಪ್ಪಳ : ಈ ಬಾರಿ ಜನರು ಜೆಡಿಎಸ್ ಗೆ ಸಂಪೂರ್ಣ ಆಶೀರ್ವಾದ ನೀಡುತ್ತಾರೆ. ಈ ಸಲ ಕಪ್‌ ನಮ್ದೇ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪುನರುಚ್ಛರಿಸಿದ್ದಾರೆ.

ಕೊಪ್ಪಳದ ಕುಕನೂರಿನಲ್ಲಿ‌ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್‌ನ ರಾಹುಲ್ ಗಾಂಧಿ ಮತ್ತು ಬಿಜೆಪಿಯ ನರೇಂದ್ರ ಮೋದಿ ವಿಧೂಷಕರು. ಅವರು ವಿಧೂಷಕರೆಂದು ಭಾಷಣದಿಂದ ಅರ್ಥವಾಗುತ್ತದೆ.  ಅವರಿಗೆ ಪ್ರಚಾರಕ್ಕಿಂತ ಮನರಂಜನೆ ನೀಡುವುದೇ ಕೆಲಸ. ಯಾರ ಆಟ ಯಾರು ಆಡಬೇಕು ಎನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ. ಇವರು ಅಖಾಡ ಸಿದ್ದಮಾಡುವುದಲ್ಲ. ಜನರು ಅಖಾಡ ತಯಾರಿಸುತ್ತಾರೆ ಎಂದಿದ್ದಾರೆ.

ಒಂದು ಕಡೆ ದೇವಗೌಡರನ್ನ ಹೊಗಳುತ್ತಾರೆ ಇನ್ನೊಂದು ಕಡೆ ಜೆಡಿಎಸ್ ಮೂರನೇ ಸ್ಥಾನಕ್ಕೆ ಬರುತ್ತೆ ಅಂತಾರೆ. ಅವರು ಯಾಕೆ ಆ ರೀತಿ ಹೊಗಳುತ್ತಾರೆ ಎಂಬುದನ್ನು ನರೇಂದ್ರ ಮೋದಿನ ನೀವೇ ಕೇಳಬೇಕು. ಇವರೆಲ್ಲ ಸೀಜನ್ ರಾಜಕಾರಣಿಗಳು. ಕೇವಲ ಅಧಿಕಾರಕ್ಕಾಗಿ ಪ್ರಚಾರ ಮಾಡುತ್ತಾರೆ. ಖರ್ಗೆ ಅವರು ಅನುಭವ ಇರುವಂತ ರಾಜಕಾರಣಿಗಳು ಅರ್ಥವಾಗುತ್ತದೆ. ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಅವರಿಗೆ ಭಾಷಣ ಬರೆದು ಕೊಡುವವರಿದ್ದಾರೆ ಅದಕ್ಕೆ ಹೊಗಳುತ್ತಾರೆ.  ಸಿನಿಮಾ ನಟರು ಎಲ್ಲರ ಪರ ಪ್ರಚಾರ ಮಾಡುತ್ತಾರೆ. ಸಿದ್ದರಾಮಯ್ಯ ಅವರು ಜನರ ಮತ ಪಡೆಯುವುದಕ್ಕೆ ಸಾಧ್ಯವಿಲ್ಲ ಅದಕ್ಕಾಗಿ ಸ್ಟಾರ್ ಗಳನ್ನು ಕರೆಸುತ್ತಿದ್ದಾರೆ. ಸ್ಟಾರ್ ಗಳು ಹಣಕ್ಕಾಗಿ ಎಲ್ಲರ ಪರ ಪ್ರಚಾರ ಮಾಡುತ್ತಾರೆ. ಸಿನಿಮಾ ಸ್ಟಾರ್ ಗಳು ಪ್ರಚಾರ ಮಾಡೊದರಿಂದ ಜನರು ಮತಗಳು ಹಾಕುವುದಿಲ್ಲ. ಜನರ ಅಭಿವೃದ್ಧಿ ಪರ ಚಿಂತನೆ ಮಾಡುವವರಿಗೆ ಮತ ಹಾಕುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಾದಾಮಿಯಲ್ಲಿ ಜೆಡಿಎಸ್ ಪರ ಟ್ರೆಂಡ್ ಇದೆ. ನಾನು ಮಾತನಾಡಿದ್ದನ್ನು ಮಾಧ್ಯಮಗಳು ತೋರಿಸುವುದೇ ಇಲ್ಲ. ಮೀಡಿಯಾ ಮಾಲೀಕರ ಮೇಲೆ ನನಗೆ ಅಸಮಾಧಾನವಿದೆ. ಯಾರಪ್ಪನಾಣೆ ಮಾಡಿದರು ಜನರು ಮತ ಹಾಕುವುದಂತೂ ಜೆಡಿಎಸ್ ಗೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com