ಸಿದ್ದರಾಮಯ್ಯ ಇದ್ದಾರಲ್ಲ ಅವರೊಬ್ಬ ಬಂಡ, ಮೊಂಡ, ಅಂತಹವರಿಗೆ ನಾವೇನೂ ಹೇಳಕ್ಕಾಗಲ್ಲ : ಶ್ರೀರಾಮುಲು
ಕೊಪ್ಪಳ : ಸಿಎಂ ಸಿದ್ದರಾಮಯ್ಯ ಒಬ್ಬ ಮೊಂಡ ಹಾಗೂ ಬಂಡ. ಬಂಡರಿಗೆ ಯಾವನೂ ಏನೂ ಹೇಳಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಶ್ರೀರಾಮುಲು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯಂಗೆ ನಿಜವಾಗಲೂ ನೈತಿಕತೆ ಎಂಬುದು ಇದ್ದಿದ್ದರೆ ಇಷ್ಟರೊಳಗೆ ರಾಜೀನಾಮೆ ನೀಡಬೇಕಿತ್ತು. ಅದು ಬಿಟ್ಟು ನಮ್ಮ ಬಗ್ಗೆ ಮಾತನಾಡ್ತಾರೆ. ನಮ್ಮ ಬಗ್ಗೆ ಮಾತನಾಡೋಕೆ ಅವರಿಗೇನು ಯೋಗ್ಯತೆ ಇದೆ ಎಂದಿದ್ದಾರೆ.
ಎಲ್ಲರ ಮನೆಗೆ ಕಲ್ಲು ಹೊಡೆಯುವ ಸಿಎಂ ಮೊದಲು ತಮ್ಮ ಮನೆ ನೋಡಿಕೊಳ್ಳಲಿ ಎಂದಿರುವ ಶ್ರೀರಾಮುಲು, ಸಿದ್ದರಾಮಯ್ಯನವರದ್ದು ಬರೀ ಹಿಟ್ ಎಂಡ್ ರನ್. ಇದಕ್ಕೆ ಜನರೇ ತಕ್ಕ ಪಾಠ ಕಲಿಸುವುದಾಗಿ ಹೇಳಿದ್ದಾರೆ. ಸಿಎಂ ಸೇರಿದಂತೆ ಹಲವಾರು ಸಚಿವರ ಮೇಲೆ ಪ್ರಕರಣ ದಾಖಲಾಗಿದೆ. ಯಾಕೆ ಅವರೆಲ್ಲರೂ ರಾಜಿನಾಮೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.