ಚುನಾವಣೆಗಾಗಿ ಮಹದಾಯಿ ಬಗ್ಗೆ ಮಾತೆತ್ತಿದ ಮೋದಿ ವಿರುದ್ದ ಕಪ್ಪು ಬಟ್ಟೆ ಪ್ರದರ್ಶನಕ್ಕೆ ಹೋರಾಟಗಾರರ ನಿರ್ಧಾರ

ಹುಬ್ಬಳ್ಳಿ : ರೈತರು ದೆಹಲಿಯ ಬೀದಿಗಳಲ್ಲಿ ಕುಳಿತು ಮಹದಾಯಿಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಮೋದಿ ಸೌಜನ್ಯಕ್ಕೂ ಅವರತ್ತ ನೋಡಿಲ್ಲ. ಚುನಾವಣೆ ಬಂದ ಕೂಡಲೆ ರಾಜ್ಯಕ್ಕೆ ಬಂದು ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ಆದರೆ ಮೋದಿಗೆ  ನಾವೇನು ಎಂಬುದನ್ನು ತೋರಿಸಬೇಕು ಎಂದು ಮಹದಾಯಿ ಹೋರಾಟಗಾರ ಸಂಜೀವ ಧುಮ್ಮಕ್ಕನವರ್‌ ಹೇಳಿಕೆ ನೀಡಿದ್ದಾರೆ.

ಚುನಾವಣಾ ನೀತಿ ಸಂಹಿತೆ ಇರಲಿ ಇರದೇ ಇರಲಿ ಅದು ನಮಗೆ ಸಂಬಂಧವೇ ಇಲ್ಲ. ನಾಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಪ್ಪುಬಟ್ಟೆ ಪ್ರದರ್ಶನ ಮಾಡಿಯೇ ತಿರುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಪ್ರಧಾನಿಯಾಗಿಯೇ ಇಲ್ಲ. ಬರೀ ಬಿಜೆಪಿಗಷ್ಟೇ ಪ್ರಧಾನಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು, ನಾಳೆ ನರೇಂದ್ರ ಮೋದಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡೋದು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಈ ಬಗ್ಗೆ ಈಗಾಗಲೆ ಮಹದಾಯಿ ಹೋರಾಟಗಾರರಿಗೆ ಹೇಳಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಮುಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿ ಬರದೇ ಇರಲಿ ವಿವಾದ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದ್ದು, ಮಹದಾಯಿ ವಿವಾದ ಇತ್ಯರ್ಥದ  ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಬೇಕು ಎಂದು ಹೋರಾಟಗಾರ ಲೋಕನಾಥ ಹೆಬಸೂರು ಹೇಳಿದ್ದಾರೆ. ಪ್ರಧಾನಿ ಮನಸು ಮಾಡಿದ್ರೆ 24 ಗಂಟೆಯೊಳಗೆ ವಿವಾದ ಇತ್ಯರ್ಥ ಸಾಧ್ಯವಿತ್ತು. ಮೋದಿ ಕುಡಿಯೋ ನೀರಿನಲ್ಲಿಯೂ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ತಕ್ಕಪಾಠ ಕಲಿಸಬೇಕು ಅಂತ 1009 ದಿನಗಳಿಂದ ಹೇಳುತ್ತಲೇ ಬಂದಿದ್ದೇವೆ. ಮಹದಾಯಿ ವಿವಾದ ಇತ್ಯರ್ಥಪಡಿಸದವರು ಯಾರೆಂದು ಎಲ್ರಿಗೂ ಈಗಾಗಲೇ ಗೊತ್ತಿದೆ. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೂ ಯಡಿಯೂರಪ್ಪ ಯೋಜನೆ ಜಾರಿ ಮಾಡಲಿಲ್ಲ.  ಹುಬ್ಬಳ್ಳಿಯ ಪರಿವರ್ತನಾ ಯಾತ್ರೆಯಲ್ಲಿ ಸಿಹಿ ಸುದ್ದಿ ಕೊಡೋದಾಗಿ ಬಿಎಸ್ ವೈ ಹೇಳಿದ್ರು. ಬಿಜೆಪಿಯವರು ಇಷ್ಟು ದಿನ ಮಹದಾಯಿ ವಿವಾದ ಇತ್ಯಪಡಿಸಲಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಈಗ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ನೀರು ತರ್ತೇವೆಂದು ಹೇಳುತ್ತಾರೆ. ಈ ಭಾಗದ ಜನರ ಕುಡಿಯೋ ನೀರಿನ ಬಗೆಗೆ ಕಾಳಜಿಯಿದ್ರೇ ನಾಳೆಯೇ ಮೋದಿ ಹೇಳಲಿ. ಅಧಿಕಾರಕ್ಕೆ ಬಂದ್ರೂ ಬರದೇ ಇದ್ರೂ ರಾಜಿಸಂಧಾನ ನಡೆಸಿ ಯೋಜನೆ ಜಾರಿ ಮಾಡಲಿ ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com