ಈ ದೇವೇಗೌಡ ವ್ಯಕ್ತಿಯಲ್ಲ ಶಕ್ತಿ ಎಂಬುದು ನೆನಪಿರಲಿ, ಈ ಗೌಡ ಏನು ಅಂತ ಇಡೀ ಹಿಂದೂಸ್ತಾನಕ್ಕೇ ಗೊತ್ತು : HDD

ಚಿಕ್ಕಮಗಳೂರು : ಕಡೂರು ಶಾಸಕ ವೈ.ಎಸ್.ವಿ ದತ್ತ ಈ ಬಾರಿ ಗೆದ್ದೇ ಗೆಲ್ಲುತ್ತಾರೆ.  ಸಣ್ಣ ಸಮಾಜದ ವ್ಯಕ್ತಿ ಮುಂದಕ್ಕೆ ಹೋಗುತ್ತಿರುವುದಕ್ಕೆ ಕೆಲವರಿಗೆ ಅಸೂಯೆ ಕಾಡುತ್ತಿದೆ ಎಂದು ಎಚ್‌.ಡಿ ದೇವೇಗೌಡ ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದೇವೇಗೌಡ, ಈ ದೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿವೆ. ಕಾಂಗ್ರೆಸ್, ಬಿಜೆಪಿಯನ್ನು ಎದುರಿಸುವ ಶಕ್ತಿ ಜೆಡಿಎಸ್‌ಗಿದೆ. ಇದರಲ್ಲಿ ಸಂಶಯವೇ ಬೇಡ. ಅದನ್ನು ನಾನು ಈಗಾಗಲೇ ಸಾಬೀತು ಮಾಡಿರುವುದಾಗಿ ಹೇಳಿದ್ದಾರೆ.

ಇಡೀ ಹಿಂದೂಸ್ಥಾನದಲ್ಲಿ ಈ ದೇವೇಗೌಡ ಏನೆಂದು ಸಾಬೀತು ಮಾಡಿದ್ದೇನೆ. ಆದರೂ ದೇವೇಗೌಡರ ಮೇಲೆ ರಾಷ್ಟ್ರೀಯ ಪಕ್ಷಗಳಿಗೆ ಸಂಶಯವಿದೆ. ಜೆಡಿಎಸ್ ಗೆ ಬಟನ್ ಒತ್ತಿದ್ರೆ, ಬಿಜೆಪಿಗೆ ಹೋಗುತ್ತೆ ಎಂದು ಮಹಾನ್ ಮುಖ್ಯಮಂತ್ರಿ ಹೇಳಿದ್ದಾರೆ. ಇವರು ಯಾರು, ಎಲ್ಲಿದ್ದರು ಎಂದು ನನಗೆ ಗೊತ್ತು.  ಅವರನ್ನು ರಾಜಕೀಯವಾಗಿ ತಲೆ ಮೇಲೆ ಹೊತ್ತುಕೊಂಡು ನಾನು ತಿರುಗಿದ್ದೇನೆ. ನೆನಪಿರಲಿ ಈ ದೇವೇಗೌಡ ವ್ಯಕ್ತಿ ಅಲ್ಲ ಶಕ್ತಿ ಎಂದಿದ್ದಾರೆ.

ಜೆಡಿಎಸ್ ಗೆ ವೋಟ್ ಕೊಡಬೇಡಿ ಎಂದು ಸಿಎಂ ಹೇಳಿದ್ದರು.  ಆದರೆ ಮಾರನೇ ದಿನವೇ ನಮ್ಮ ಕರ್ನಾಟಕದ ಮಾಜಿ ಪ್ರಧಾನಿ ಅಂತ ಹೊಗಳುತ್ತಾರೆ. ಇದರ ಅರ್ಥ ಏನು ಅಂತ ಅವರೇ ಹೇಳಬೇಕು. ಮಾಜಿ ಪ್ರಧಾನಿಯಾದ ನನ್ನ ಫೋಟೋವನ್ನು ವಿಧಾನಸೌದದಿಂದ ಕಿತ್ತು ಬಿಸಾಕಿದ್ದಾರೆ. ಈ ಹಿಂದೆ ಇದ್ದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡ ಆ ರೀತಿ ಮಾಡಲಿಲ್ಲ.ಇಂತಹ ಕೀಳು ದರ್ಜೆಯ ಮಾತು ಹಾಗೂ ಕೆಲಸ ಮುಖುಮಂತ್ರಿಗೆ ಶೋಭೆ ತರುವುದಿಲ್ಲ. ನಾನು ಇಷ್ಟೆಲ್ಲ ಹೋರಾಟ ಮಾಡಿದ್ದೇನೆ. ನನ್ನ ಮಗನನ್ನೇ ಮುಖ್ಯಮಂತ್ರಿ ಮಾಡಬೇಕು ಎಂದಿದ್ದರೆ, ಸಿಎಂ ಇಬ್ರಾಹಿಂ, ಸಿದ್ದರಾಮಯ್ಯ ಹಾಗೂ ಜೆ.ಹೆಚ್ ಪಟೇಲ್ ಅವರನ್ನು ಬೆಳಸುತ್ತಿರಲಿಲ್ಲ.  ನನ್ನ ಹೆಸರಲ್ಲಿ ಗೌಡ ಅಂತ ಇರಬಹುದು. ಆದರೇ ಸಣ್ಣ ಸಣ್ಣ ಜಾತಿಯವರನ್ನು ಹೊತ್ತುಕೊಂಡು ನಾನು ಮುಂದೆ ತಂದಿದ್ದೇನೆ.  ನಾನು ಸಿಎಂ ಆದಾಗ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ತಂದಿದ್ದೇನೆ. ಸರ್ಕಾರದ 650 ಕೋಟಿ ಹಣ್ಣವನ್ನು ಜಾಹೀರಾತಿಗಾಗಿ ಖರ್ಚು ಮಾಡಿದ್ದಾರೆ. ಸರ್ಕಾರದ ಲೋಗೋ ಹಾಕಿ ನಮ್ಮ ಸಿದ್ದು, ಇಂದಿರಾ ಕ್ಯಾಂಟೀನ್ ಅಂತ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಬಯಲುಸೀಮೆ ಭಾಗದಲ್ಲಿ ನೀರು ಕೊಡಲು ಆಗುವುದಿಲ್ಲ ಇವರಿಗೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಪ್ರಧಾನಿ ಸಹ ಪ್ರಯೋಜನವಿಲ್ಲ. ರೈತ ಸತ್ತು ಹೋಗುತ್ತಿದ್ದಾನೆ ಏನಾದ್ರು ಕೊಡಪ್ಪ ಅಂದ್ರೆ ಉಸಿರೆ ಇಲ್ಲ. ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇದೆ ಅಂದ್ರೆ ನಾನು ಅವರ ಮುಂದೆ ತಲೆ ಬಾಗುತ್ತೇನೆ. ಜೀವನದಲ್ಲಿ 10 ತಿಂಗಳು ಪ್ರಧಾನಿ ಮಂತ್ರಿ, 1.50 ವರ್ಷ ಮುಖ್ಯಮಂತ್ರಿ ಆಗಿ ರಾಜೀನಾಮೆ ಕೊಟ್ಟಿದ್ದೇನೆ ನೆನಪಿರಲಿ ಎಂದಿದ್ದಾರೆ.

One thought on “ಈ ದೇವೇಗೌಡ ವ್ಯಕ್ತಿಯಲ್ಲ ಶಕ್ತಿ ಎಂಬುದು ನೆನಪಿರಲಿ, ಈ ಗೌಡ ಏನು ಅಂತ ಇಡೀ ಹಿಂದೂಸ್ತಾನಕ್ಕೇ ಗೊತ್ತು : HDD

Leave a Reply

Your email address will not be published.