ಮೋದಿ ಚೀನಾ ಗೂಡ್ಸ್‌ ಇದ್ದಂಗೆ, ಅವರ ಮಾತಿಗೆ ವಾರೆಂಟಿಯೂ ಇಲ್ಲ, ಗ್ಯಾರೆಂಟಿಯೂ ಇಲ್ಲ : ರಾಮಲಿಂಗಾರೆಡ್ಡಿ

ಬೆಂಗಳೂರು : ಪ್ರಧಾನಿ ಮೋದಿ ಚೀನಾ ದೇಶವನ್ನು ಸುತ್ತಿಕೊಂಡು ಬಂದಿದ್ದಾರೆ. ಚೀನಾದಂತೆ ಅವರ ಮಾತಿಗೆ ಗ್ಯಾರೆಂಟಿಯೂ ಇಲ್ಲ, ವಾರೆಂಟಿಯೂ ಇಲ್ಲ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಸುಳ್ಳಿನ ಭಾಷಣ ಮಾಡುವುದಕ್ಕೆ ಮೋದಿಗೆ ನೊಬೆಲ್‌ ಬಹುಮಾನ ಕೊಡಬೇಕು. ಮೋದಿ ಚೀನಾ ಗೂಡ್ಸ್‌ ಆಗಿದ್ದಾರೆ. ಬೆಂಗಳೂರನ್ನು ಕ್ರೈಂ ಸಿಟಿ ಎಂದು ಕರೆಯುವ  ಮೋದಿ, ಆದರೆ ಬಿಜೆಪಿ ಅಧಿಕಾರದಲ್ಲಿದ್ದಾಗ ಬಿಜೆಪಿ ಕ್ರೈಂ ಸಿಟಿಯಾಗಿತ್ತು. ಈಗ ಸುಧಾರಿಸುತ್ತಿದೆ. ಬಿಜೆಪಿ ಸಂಸದರ ಮೇಲೆ ಮಹಿಳಾ ದೌರ್ಜನ್ಯ ಕೇಸ್‌ಗಳು ಹೆಚ್ಚಾಗಿ ದಾಖಲಾಗಿವೆ. ಅವುಗಳ ಬಗ್ಗೆ ಮೋದಿ ಮಾತನಾಡಲಿ ಎಂದಿದ್ದಾರೆ.

ಕರ್ನಾಟಕದ ಅನೇಕ ಬಿಜೆಪಿ ನಾಯಕರ ಮೇಲೂ ಕೇಸ್‌ಗಳಿವೆ. ಕನ್ನಡಕ ಹಾಕಿಕೊಂಡು ಮೋದಿ ಇದನ್ನೆಲ್ಲ ಒಮ್ಮೆ ನೋಡಲಿ ಎಂದಿದ್ದು, ಬೆಂಗಳೂರನ್ನು ಗಾರ್ಬೇಜ್‌ ಸಿಟಿ ಎನ್ನುವ ಮೋದಿ ತವರೇ ಗಬ್ಬೆದ್ದು ನಾರುತ್ತಿದೆ. ಮೊದಲು ಗಂಗಾನದಿ ಸ್ವಚ್ಛ ಮಾಡಿ ಇಲ್ಲವಾದರೆ ವಾರಣಾಸಿ ಅತೀ ಗಲೀಜು ಸಿಟಿಗಳಲ್ಲಿ ಮೊದಲ ಸ್ಥಾನಕ್ಕೆ ಬರುತ್ತದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com