ಬಾಲಕಿಯ ಮೇಲೆ ಅತ್ಯಾಚಾರ : ದಂಡ ವಿಧಿಸಿದ್ದಕ್ಕೆ ಕುಟುಂಬಸ್ಥರ ಕಣ್ಣೆದುರೇ ಆಕೆಯನ್ನು ಜೀವಂತ ಸುಟ್ಟ ಕಾಮುಕರು

ರಾಂಚಿ :  ಅತ್ಯಾಚಾರಿಗಳ ವಿರುದ್ದ ದೇಶದಲ್ಲಿ ಯಾವುದೇ ಕಾನೂನುಗಳು ಬಂದರೂ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಅದೇ ರೀತಿ ಜಾರ್ಖಂಡ್‌ನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. 16 ವರ್ಷದ ಬಾಲಕಿಯ ಮೇಲೆ ಐವರು ಕಾಮುಕರು ಅತ್ಯಾಚಾರವೆಸಗಿದ್ದು, ಬಳಿಕ ಬಾಲಕಿಯ ಕುಟುಂಬಸ್ಥರೆದುರೇ ಆಕೆಯನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ.

ಬಾಲಕಿ ತನ್ನ ಸಂಬಂಧಿಕರ ಮದುವೆಗೆಂದು ಹೋಗುತ್ತಿದ್ದಳು. ಈ ವೇಳೆ ಐವರು ಕಾಮುಕರ ಗುಂಪು ಬಾಲಕಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ.

ಈ ಕುರಿತು ಐಜಿಪಿ ಆಶಿಶ್‌ ಬಾತ್ರಾ ಹೇಳಿಕೆ ನೀಡಿದ್ದು, ಊರಿನ ಪಂಚಾಯಿತಿ ಅಧ್ಯಕ್ಷರು ಐವರು ಕಾಮುಕರು ಬಾಲಕಿಯ ಕುಟುಂಬಕ್ಕೆ 50 ಸಾವಿರ ನೀಡುವಂತೆ ಆದೇಶಿಸಿದ್ದು, 100 ಸಿಟ್‌ಅಪ್‌ ಹೊಡೆಯುವಂತೆ ಸೂಚಿಸಿದ್ದರು. ಆದರೆ ಇದರಿಂದ ಸಿಟ್ಟಿಗೆದ್ದ ಯುವಕರು ಪಂಚಾಯಿತ್‌  ಸದಸ್ಯರು ಹಾಗೂ ಬಾಲಕಿಯ ಕುಟುಂಬಸ್ಥರ ಜೊತೆ ವಾಗ್ವಾದ ನಡೆಸಿದ್ದಾರೆ.

ಬಳಿಕ ಯುವಕರು ಬಾಲಕಿಯ ಮನೆಗೆ ತೆರಳಿದ್ದು, ಕುಟುಂಬಸ್ಥರ ಎದುರೇ ಬಾಲಕಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಒಬ್ಬ ಆರೋಪಿಯನ್ನು  ಪೊಲೀಸರು ಬಂಧಿಸಿದ್ದು, ಇನ್ನುಳಿದವರಿಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ.

Leave a Reply

Your email address will not be published.

Social Media Auto Publish Powered By : XYZScripts.com