ಶ್ರೀದೇವಿ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಪುತ್ರಿ : ಅಮ್ಮನ ಸೀರೆಯುಟ್ಟು ಕಂಗೊಳಿಸಿದ ಜಾಹ್ನವಿ

ದೆಹಲಿಯಲ್ಲಿ ಗುರವಾರ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ರಾಜ್ಯವರ್ಧನ್ ಸಿಂಗ್ ರಾಠೋಡ್ ಅವರು ವಿಜೇತ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಬಾಲಿವುಡ್ ಖ್ಯಾತ ನಟಿ, ದಿವಂಗತ ಶ್ರೀದೇವಿ ಅವರಿಗೆ ಮರಣೋತ್ತರವಾಗಿ ಅತ್ಯುತಮ ನಟಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಶ್ರೀದೇವಿ ಪರವಾಗಿ ಪತಿ ಬೋನಿ ಕಪೂರ್, ಮಕ್ಕಳಾದ ಜಾಹ್ನವಿ ಹಾಗೂ ಖುಶಿ ಕಪೂರ್ ಪ್ರಶಸ್ತಿ ಸ್ವೀಕರಿಸಿದರು.

Image result for janhvi sridevi award

ವಿಶೇಷವೆಂದರೆ ಸಮಾರಂಭಕ್ಕೆ ಶ್ರೀದೇವಿ ಹಿರಿಯ ಮಗಳಾದ ಜಾಹ್ನವಿ ಕಪೂರ್, ಅಮ್ಮನದೇ ಸೀರೆಯುಟ್ಟು ಬಂದಿದ್ದರು. ಶ್ರೀದೇವಿ ಧರಿಸಿದ್ದ ಗುಲಾಬಿ ಬಣ್ಣದ ಕಾಂಜೀವರಂ ಸೀರೆಯನ್ನುಟ್ಟು ಜಾಹ್ನವಿ ಕಂಗೊಳಿಸುತ್ತಿದ್ದರು. ‘ ಶ್ರೀದೇವಿ ಈ ಸೀರೆಯನ್ನು ತೆಲುಗು ನಟ ರಾಮಚರಣ್ ತೇಜ್ ಅವರ ವಿವಾಹದಲ್ಲಿ ಧರಿಸಿದ್ದರು ‘ ಎಂದು ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com