ಸಿದ್ದರಾಮಯ್ಯ ಸರ್ಕಾರದ ಸಾಲಮನ್ನಾ ಪ್ರಯೋಜನ ಪಡೆದ BJP ಅಭ್ಯರ್ಥಿ..?

ಉಡುಪಿ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ಸಂಜೀವ ಮಠಂದೂರು ರಾಜ್ಯ ಸರ್ಕಾರದ ಸಾಲಮನ್ನಾದ ಫಲಾನುಭವಿಯಾಗಿದ್ದು, ಸಿದ್ದರಾಮಯ್ಯ ಸರ್ಕಾರದ ಸಾಲಮನ್ನಾ ಯೋಜನೆಯ ಪ್ರಯೋಜನವನ್ನು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯ ಸಂಘದಿಂದ ಸಾಲಮನ್ನಾ ಯೋಜನೆ ಫಲಾನುಭವಿಗಳ ಹೆಸರುಗಳ ಪಟ್ಟಿಯನ್ನು ನೀಡಲಾಗಿದೆ. ಈ ಪಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಅವರ ಹೆಸರು ಇರುವುದು ಆರೋಪ ಕೇಳಿ ಬರಲು ಕಾರಣವಾಗಿದೆ.

ಸಂಜೀವ ಮಠಂದೂರು ಈ ಹಿಂದೆ ಪಡೆದುಕೊಂಡಿದ್ದ 50,000 ರೂಪಾಯಿ ಸಾಲವನ್ನು 2017 ರಲ್ಲಿ ಅದನ್ನು ಮನ್ನಾ ಮಾಡಲಾಗಿದೆ ಎಂಬ ಮಾಹಿತಿ ವೈರಲ್ ಆಗಿರುವ ಚಿತ್ರದಲ್ಲಿದೆ.

Leave a Reply

Your email address will not be published.

Social Media Auto Publish Powered By : XYZScripts.com