Dharmashala : ಟಿಬೆಟಿಯನ್ ಧರ್ಮಗುರು ದಲೈ ಲಾಮಾ ನಿವಾಸಕ್ಕೆ ಸಚಿನ್ ಭೇಟಿ

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗುರುವಾರ ಟಿಬೆಟ್ ನ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಹಿಮಾಚಲ ಪ್ರದೇಶದ ಧರ್ಮಾಶಾಲಾಕ್ಕೆ 4 ದಿನಗಳ ಖಾಸಗಿ ಭೇಟಿಯಲ್ಲಿರುವ ಸಚಿನ್, ಮೆಕ್ಲಿಯೋಡ್ ಗಂಜ್ ನಲ್ಲಿರುವ ದಲೈ ಲಾಮಾ ನಿವಾಸಕ್ಕೆ ತೆರಳಿದ್ದರು.

ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿನ್ ‘ ಇದೊಂದು ಒಳ್ಳೆಯ ಭೇಟಿಯಾಗಿತ್ತು, ಇಲ್ಲಿಗೆ ಬಂದು ಅವರ ಆಶಿರ್ವಾದ ಪಡೆಯಬೇಕೆಂದು ತುಂಬಾ ದಿನಗಳಿಂದ ಬಯಸಿದ್ದೆ. ದಲಾಯಿ ಲಾಮಾ ಭೇಟಿಯಾಗಿ, ಅವರೊಂದಿಗೆ ಸ್ವಲ್ಪ ಹೊತ್ತು ಕಳೆಯಬೇಕೆಂದು ಆಶಿಸಿದ್ದೆ. ಇತರರಿಗೆ ಸಂತೋಷವನ್ನು ಹರಡುವುದು, ಕೋಮು ಸೌಹಾರ್ದದಂತಹ ವಿಷಯಗಳ ಬಗ್ಗೆ ನಾವು ಚರ್ಚೆ ನಡೆಸಿದೆವು ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com