ಸಿದ್ದರಾಮಯ್ಯ 15 ರೂಪಾಯಿ ಕ್ವಾಟ್ರು ಬಾಟ್ಲಿನ 75 ರೂಪಾಯಿಗೆ ಮಾರಾಟ ಮಾಡ್ತಿದ್ದಾರೆ ಗೊತ್ತಾ ? : HDK

ರಾಯಚೂರು : ಜಿಲ್ಲೆಯ ಸೂಗೂರಿನಲ್ಲಿಂದು ಎಚ್‌ಡಿಕೆ ಪ್ರಚಾರ ಕೈಗೊಂಡಿದ್ದಾರೆ. ಗ್ರಾಮೀಣ ಅಭ್ಯರ್ಥಿ ರವಿ ಪಾಟೀಲ್ ಪರ ಪ್ರಚಾರದ ವೇಳೆ ಮಾತನಾಡಿದ ಎಚ್‌ಡಿಕೆ,  ರಾಯಚೂರು ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದೀರಿ. ಕುಡಿಯುವ ನೀರಿನಲ್ಲಿ ವಿಷ ಮಿಶ್ರಿತ, ಫ್ಲೋರೈಡ್ ಮಿಶ್ರಿತವಾಗಿದೆ. ಸರ್ಕಾರ ಶುದ್ದ ಕುಡಿಯುವ ನೀರು ಕೊಡುತ್ತಿಲ್ಲ.  ವಿದ್ಯುತ್ ಶಕ್ತಿ ಕೊಡುವಲ್ಲಿ ಇಲ್ಲಿನ ಜನರಿಗೆ ಅನ್ಯಾಯವಾಗಿದೆ. ಈ ಜಿಲ್ಲೆಗೆ ಹಲವಾರು ಕಾರ್ಯಕ್ರಮಗಳ ಅವಶ್ಯಕತೆ ಇದೆ. ಅದಕ್ಕಾಗಿ ಜೆಡಿಎಸ್‌ಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

 

ಜೂನ್ ತಿಂಗಳಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗ್ತಾರಾ ಗೊತ್ತಿಲ್ಲ. ಯಡಿಯೂರಪ್ಪ ಮೇ 17 ಕ್ಕೆ ರಾಜ್ಯದ ಮುಖ್ಯಮಂತ್ರಿ ಆಗ್ತೀನಿ ಎಂದು ಸ್ವಯಂ ಘೋಷಣೆ ಮಾಡ್ಕೊಂಡಿದ್ದಾರೆ.  ಸಿದ್ದರಾಮಯ್ಯನೂ ಹೇಳಿದ್ದಾರೆ. ಆದರೆ ನಾನು ಘೋಷಣೆ ಮಾಡಿಕೊಂಡಿಲ್ಲ. ಜನತೆ ಅಧಿಕಾರ ಕೊಟ್ರೆ 24 ಗಂಟೆಯಲ್ಲಿ ರಾಷ್ಟ್ರೀಕೃತ, ಗ್ರಾಮೀಣ , ಸಹಕಾರ ಬ್ಯಾಂಕ್ ಗಳ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದಾರೆ.

ನಾನು ಏಕಾಂಗಿ. ಉತ್ತರ ಪ್ರದೇಶದಿಂದ ಮದ್ಯಪ್ರದೇಶದಿಂದ ಬರೋರ್ಯಾರೂ ಇಲ್ಲ. ಸಿದ್ದರಾಮಯ್ಯ 15 ರೂಪಾಯಿ ಕ್ವಾಟರ್ ಬಾಟ್ಲಿನ 75 ರೂಪಾಯಿಗೆ ಮಾರುತ್ತಿದ್ದಾರೆ. ಜನರ ದುಡ್ಡು ಹೊಡೆದು ದೆಹಲಿ ಹೈಕಮಾಂಡಿಗೆ ನಾನು ಕಳುಹಿಸುವುದಿಲ್ಲ. ನರೇಂದ್ರ ಮೋದಿ ಮಾತಿಗೆ ಮರಳಾಗಬೇಡಿ. ಕರ್ನಾಟಕಕ್ಕೆ ಬಂದು ನಾನು ಕನ್ನಡಿಗ ಎಂದು ಹೇಳುತ್ತಾರೆ. ಆದರೆ ಜನರ ಕಷ್ಟಕ್ಕೆ ಬಂದಿಲ್ಲ . ಮೋದಿ ಹಾಗೂ ಗಾಂಧಿ ಇಬ್ಬರೂ ಜನರ ಕೈಲಿ ಬೈಯಿಕೊಂಡು ತಿರುಗುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com