ಸಿದ್ದರಾಮಯ್ಯ ಪರ ಪ್ರಚಾರ ಮಾಡಲು ಮೈಸೂರಿಗೆ ಬಂದ ಬಾಲಿವುಡ್‌ನ ಸ್ಟಾರ್ ನಟ !

ಮೈಸೂರು : ಸಿಎಂ ಸಿದ್ದರಾಮಯ್ಯ ಪರ ಸ್ಟಾರ್‌ಗಳ ಕ್ಯಾಂಪೈನ್‌ ಶುರುವಾಗಿದೆ. ಗುರುವಾರ ಬಾಲಿವುಡ್‌ ನಟ ರಾಜ್‌ ಬಬ್ಬರ್‌ ಸಿದ್ದರಾಮಯ್ಯ ಪರ ಮೈಸೂರಿನ ಭಾರತ್‌ ನಗರದಲ್ಲಿ ಪ್ರಚಾರ ಮಾಡಿದ್ದಾರೆ.

ರಾಜ್‌ ಬಬ್ಬರ್‌ಗೆ ರಾಜೇಂದ್ರ ಸಿಂಗ್ ಬಾಬು ಹಾಗೂ ಪುತ್ರಿ ರಿಷಿಕಾ ಸಿಂಗ್ ಸಾಥ್ ನೀಡಿದ್ದಾರೆ. ಅಲ್ಲದೆ  ನಟ ಮದನ್ ಪಟೇಲ್‌ ಸಹ ಸಿದ್ದರಾಮಯ್ಯನವರಿಗೆ ಸಾಥ್‌ ನೀಡಿದ್ದಾರೆ.

ಮನೆ ಮನೆಗೆ ತೆರಲಿ ಮತಯಾಚನೆ ಮಾಡಿದ ರಾಜ್‌ ಬಬ್ಬರ್‌, ಚಾಮುಂಡೇಶ್ವರಿ ಸಿದ್ದರಾಮಯ್ಯ ಕ್ಷೇತ್ರವಲ್ಲ ಇದು ಕುಟುಂಬ ಇದ್ದ ಹಾಗೆ. ಇಲ್ಲಿನ ಜನರು ಸಿದ್ದರಾಮಯ್ಯರ ಕುಟುಂಬಸ್ಥರ ಹಾಗೇ ಇದ್ದಾರೆ. ಸಿದ್ದರಾಮಯ್ಯರ ಅನ್ನಭಾಗ್ಯ, ಕ್ಷೀರಭಾಗ್ಯ, ಹಾಗೂ ಇತರೆ ಭಾಗ್ಯಗಳು ಜನರನ್ನ ತಲುಪಿದೆ. ಪತ್ರಿಕೆಯಲ್ಲಿ ದೇವೆಗೌಡರ ವರದಿಯೊಂದನ್ನ ಓದಿದೆ‌. ಅವರು ಬಿಜೆಪಿ ಕಾಲೆಳೆದರೆ, ಬಿಜೆಪಿಯವರು ಜೆಡಿಎಸ್ ಕಾಲೆಳೆದಿದ್ದಾರೆ‌. ಬಿಜೆಪಿ ಸ್ಟಾರ್ ಕ್ಯಾಂಪೈನರ್ ಯೋಗಿ ಇಲ್ಲಿಗೆ ಬಂದಿದ್ದಾರೆ. ಅವರನ್ನ ನೋಡಿದ್ರೆ ಯಾರು ಓಟು ಹಾಕೋಲ್ಲ‌.  ಈ ರಾಜ್ಯಕ್ಕೆ ಸಿದ್ದರಾಮಯ್ಯರ ಅವಶ್ಯಕತೆ ಇದೆ. ಹೀಗಾಗಿ ಜನ ಇಲ್ಲಿ ಸಿದ್ದರಾಮಯ್ಯರನ್ನ ಗೆಲ್ಲಿಸಿ ಕಳುಹಿಸುತ್ತಾರೆಂಬ ನಂಬಿಕೆಯಿರುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.