ದಲಿತರ ಮನೆಯಲ್ಲಿ ರಾತ್ರಿಯಿಡೀ ಸೊಳ್ಳೆ ಕಚ್ಚುತ್ತವೆ : ಉ.ಪ್ರ.ಸಚಿವೆಯಿಂದ ವಿವಾದಾತ್ಮಕ ಹೇಳಿಕೆ

ಲಖನೌ : ಇತ್ತೀಚೆಗಷ್ಟೇ ಬಿಜೆಪಿ ಹಮ್ಮಿಕೊಂಡಿದ್ದ ಡಿನ್ನರ್‌ ವಿತ್‌ ದಲಿತ್ಸ್‌ ಅಭಿಯಾನದ ವೇಳೆ ಹೊಟೆಲ್‌ನಿಂದ ಊಟ ತೆಗೆದುಕೊಂಡು ಹೋಗಿ ತಿಂದಿದ್ದ ನಾಯಕಿಯೊಬ್ಬರು ಈಗ ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ.
ದಲಿತರ ಮನೆಯಲ್ಲಿ ಸೊಳ್ಳೆಗಳು ಹೆಚ್ಚು, ರಾತ್ರಿಯಿಡೀ ಕಚ್ಚುತ್ತವೆ. ಈ ಮಧ್ಯೆಯೇ ಉತ್ತರ ಪ್ರದೇಶ ಸಚಿವರು ಅವರತ ಶ್ರಮಪಟ್ಟು ಕೆಲಸ ಮಾಡುತ್ತಿರುವುದಾಗಿ ಉತ್ತರ ಪ್ರದೇಶ ಶಿಕ್ಷಣ ಸಚಿವೆ ಅನುಪಮಾ ಜೈಸ್ವಾಲ್‌ ಹೇಳಿದ್ದಾರೆ.
ಉತ್ತರ ಪ್ರದೇಶದ ಸಚಿವರು ಜನರ ಕಲ್ಯಾಣಕ್ಕಾಗಿ ಹಗಲಿರುಳು, ಸೊಳ್ಳೆಗಳ ಕೈಲಿ ಕಚ್ಚಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಸಮಾಜದ ಎಲ್ಲಾ ವರ್ಗಗಳ ಅಭ್ಯುದಯಕ್ಕೆ ಸರ್ಕಾರ ವಿವಿಧ ಬಗೆಯ ಯೋಜನೆಗಳನ್ನು ರೂಪಿಸಿದೆ. ಇದನ್ನು ಜನರಿಗೆ ತಲುಪಿಸಲು ಸಚಿವರು ಪಣ ತೊಟ್ಟು, ಹಗಲು, ರಾತ್ರಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಕೆಲಸ ಹೆಚ್ಚಿತೆಂದು ನಾವ್ಯಾರೂ ಗೊಣಗುತ್ತಿಲ್ಲ. ಆದರೆ ಮನೆಗಳಲ್ಲಿ ಸೊಳ್ಳೆ ಕಚ್ಚಿಸಿಕೊಳ್ಳಬೇಕಾಗುತ್ತದೆ. ಆದರೆ ಅದಕ್ಕಿಂತ ಉತ್ತಮ ಅನುಭವವಾಗುತ್ತಿದೆ ಎಂದಿದ್ದಾರೆ.
ಸಚಿವರುಗಳಿಗೆ 2 ಕ್ಷೇತ್ರಗಳಲ್ಲಿ ಕೆಲಸ ಮಾಡಿ ಎಂದರೆ ನಾಲ್ಕು ಕಡೆ ತೆರಳುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಆನೆ ಬಲ ಬಂದಂತಾಗಿದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com