ಮೋದಿ ಕೈಯಲ್ಲಿ ಮೈಕ್ ಬಿಟ್ರೆ ಇನ್ನೇನು ಇಲ್ಲ, ಎಲ್ಲಾ ಇರೋದು RSS, VHP ಕೈಯಲ್ಲಿ : ಖರ್ಗೆ

ಕಲಬುರ್ಗಿ : ಕಲಬುರ್ಗಿ ಜಿಲ್ಲೆಯ ಕಾಳಗಿ ಪಟ್ಟಣದ ಬಹಿರಂಗ ಸಮಾವೇಶದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮಲ್ಲಿಕಾರ್ಜುನ ಖರ್ಗೆ ಮತಯಾಚನೆ ಮಾಡಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಒರ್ವ ಸುಳ್ಳುಗಾರ. ಮಾತೆತ್ತಿದರೆ ಸುಳ್ಳಿನ ಸರಮಾಲೆ ಜೋಡಿಸುತ್ತಾರೆ.  ರೈತರ ಸಾಲ ಮನ್ನಾ ಮಾಡದೇ ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ.  ಖರ್ಗೆ ಅವರನ್ನು ಸಿಎಂ ಮಾಡ್ತಿನಿ ಅಂತ ಕಾಂಗ್ರೆಸ್ ಮೋಸ ಮಾಡಿದ್ದಾರೆ ಎಂದಿದ್ದಿರಿ, ಆದರೆ, ಕೇಂದ್ರದಲ್ಲಿ ದಲಿತರಿಗೆ ವಿರೋಧ ಪಕ್ಷದ ಸ್ಥಾನ ಕೊಡಲಿಲ್ಲ ಯಾಕೆ..?ಎಂದು ಪ್ರಶ್ನಿಸಿದ್ದಾರೆ.

ಮೋದಿ, ನೀವಿರೋದು ಆರ್ ಎಸ್ ಎಸ್, ವಿಎಚ್ ಪಿ ಸಂಘಟನೆಯ ಕೈಯಲ್ಲಿ ಎನ್ನೋದನ್ನು ಮರೆಯಬಾರ್ದು. ಮೋದಿ ಕೈಯಲ್ಲಿ ಏನೂ ಇಲ್ಲ. ಬರೀ ಮೈಕೊಂದು ಮಾತ್ರ ಕೊಟ್ಟಿದ್ದಾರೆಂದು ಲೇವಡಿ ಮಾಡಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ ನೆಹರು, ರಾಹುಲ್ ಗಾಂಧಿ, ನನ್ನ ವಿರುದ್ದ ಮಾತನಾಡೋದನ್ನು ಬಿಟ್ಟು ಅಭಿವೃದ್ಧಿ ಕೆಲಸ ಏನ್ ಮಾಡಿದ್ದಿರಿ.  ನನ್ನ ಆಸ್ತಿ ಬಗ್ಗೆ ಮೋದಿ ಮಾತನಾಡಿದ್ದಾರೆ. ಇದು ಜನರ ದಾರಿ ತಪ್ಪಿಸುವ ಕೆಲಸರಾಜ್ಯ ಸರಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಅದಕ್ಕೆ ಮತ ಕೇಳ್ತಿದ್ದೀವಿ. ನೀವೇನು ಕೆಲಸ ಮಾಡಿದ್ದಿರಿ ಅನ್ನೋದನ್ನು ಜನರಿಗೆ ಹೇಳಿ ಎಂದು ಖರ್ಗೆ ಸಲಹೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com