ಶೋಭಾ ಕರಂದ್ಲಾಜೆ ಇರೋವರೆಗೂ ಬಿಜೆಪಿ ಉದ್ಧಾರ ಆಗಲ್ಲ ಎಂದ ಕಮಲ ಪಕ್ಷದ ಮಾಜಿ ನಾಯಕ !

ಚಿಕ್ಕಮಗಳೂರು : ಜಿಲ್ಲೆಯ ತರೀಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಎಚ್​ ಎಂ ಗೋಪಿಕೃಷ್ಣ,  ಬಿಜೆಪಿ ಹಾಗೂ ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜನೆಗೊಂಡಿದ್ದ ಬಿಜೆಪಿ ಬಹಿರಂಗ ಸಭೆಯಲ್ಲಿ ಬಂಡಾಯ ಅಭ್ಯರ್ಥಿ ಗೋಪಿಕೃಷ್ಣ ವಿರುದ್ಧ ಶೋಭಾ ಕರಂದ್ಲಾಜೆ ಬಿಜೆಪಿ ಬೆನ್ನಿಗೆ ಚೂರಿ ಹಾಕಿದವರಿಗೆ ಮತ ನೀಡಬೇಡಿ ಎಂದು ಹೇಳಿಕೆ ನೀಡಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗೋಪಿಕೃಷ್ಣ ಬಿಜೆಪಿಗೆ ನಾನು ಚೂರಿ ಹಾಕಿಲ್ಲ. ನನಗೆ ಟಿಕೆಟ್​ ತಪ್ಪಿಸಿ ಬೆನ್ನಿಗೆ ಚೂರಿ ಹಾಕಿದ್ದು ಶೋಭಾ ಕರಂದ್ಲಾಜೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಂಗದಹಳ್ಳಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಗೋಪಿಕೃಷ್ಣ ಎಲ್ಲಿಯವರೆಗೆ ಶೋಭಾ ಕರಂದ್ಲಾಜೆ ಬಿಜೆಪಿಯಲ್ಲಿ ಇರ್ತಾರೋ ಅಲ್ಲಿಯವರೆಗೆ ಬಿಜೆಪಿ ಉದ್ದಾರ ಆಗಲ್ಲ. ಬಿ ಫಾರಂಗಳು ಅಂತಿಮ ಆಗೋದು ಶೋಭಾ ಕರಂದ್ಲಾಜೆ ಮನೆಯಲ್ಲಿಯೇ. ಆದ್ದರಿಂದ ರಾಜ್ಯದಲ್ಲಿ ಬಿಜೆಪಿ ಬಿ ಫಾರಂಗಳು ಎಲ್ಲಿಯವರೆಗೆ ಮನೆಗೆ ಕೊಡ್ತಾರೋ ಅಲ್ಲಿಯವರೆಗೆ ಬಿಜೆಪಿ ಉದ್ದಾರ ಆಗಲ್ಲ ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ಗೋಪಿಕೃಷ್ಣ ಲೋಕಸಭೆ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಗೆಲುವಿಗೆ ದುಡಿದಿದ್ದೆ. ಆಗ ನಮ್ಮ ಮನೆಗೆ ಬಂದು ನನ್ನ ಪರವಾಗಿ ಕೆಲಸ ಮಾಡು ಅಂತಾ ಹೇಳಿದ್ರು. ಆದ್ರೆ ಈಗ ನನ್ನ ಬೆನ್ನಿಗೆ ಚೂರಿ ಹಾಕಿದ್ದು ನನಗೆ ಟಿಕೆಟ್​ ತಪ್ಪಲು ಶೋಭಾ ಕರಂದ್ಲಾಜೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.