ಸಿದ್ರಾಮಯ್ಯ ಒಬ್ಬ ಬಿಕನಾಸಿ, ಕಾಂಗ್ರೆಸ್‌ ಆತ್ಮಹತ್ಯೆ ಮಾಡಿಕೊಳ್ಳೋ ಹಾಗಾಗ್ಲಿ : ಅನಂತ್ ಕುಮಾರ್ ಹೆಗಡೆ

ಬೆಳಗಾವಿ :  ಧರ್ಮ ಒಡೆಯುವ ಜೊತೆಗೆ ದೇಶ ಕೂಡ ಹಾಳು ಮಾಡ್ತಾನೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅನಂತಕುಮಾರ ಸಿದ್ದರಾಮಯ್ಯನಂಥವರು ಲಿಂಗಾಯತ, ಶೆಟ್ಟಿ, ಭಟ್ ಎಂದು ಜಾತಿ ಒಡೆಯುತ್ತಿದ್ದಾರೆ. ಹಿಂದೂಗಳಾದ ನಾವು ಒಟ್ಟಿಗೆ ನಿಲ್ಲುತ್ತಿಲ್ಲ ಅದೇ ನಮ್ಮ ದೌರ್ಬಲ್ಯ. ನಾವೆಲ್ಲರೂ ಒಂದಾಗಿ ನಿಂತರೆ ಮಾತ್ರ ಸಿದ್ದರಾಮಯ್ಯನಂತವರು ಕುತಂತ್ರಿಗಳು ದೇಶದಲ್ಲಿ ಉಳಿಯುವುದಿಲ್ಲ. ಧರ್ಮ ಒಡೆಯುವ ಸಿದ್ದರಾಮಯ್ಯ ಅಗತ್ಯತೆ ನಮಗಿಲ್ಲ. ಬಿಜೆಪಿಯಿಂದ ಧರ್ಮ ಜೋಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಬಿಜೆಪಿ ಸರ್ಕಾರದ ಅನಿವಾರ್ಯತೆ ಈ ರಾಜ್ಯಕ್ಕೆ ಇದೆ. ಸಿದ್ದರಾಮಯ್ಯನವರನ್ನು ಮನೆಗೆ ಕಳಿಸಿ, ಬಿಎಸ್‍ವೈರನ್ನು ಸಿಎಂ ಮಾಡಬೇಕು ಎಂದು ರಾಜ್ಯದ ಜನತೆ ಈಗಾಗಲೇ ನಿರ್ಧಾರ ಮಾಡಿದ್ದಾರೆ ಎಂದರು.

ತಮ್ಮ ಅವಧಿಯಲ್ಲಿ ಸಿದ್ದರಾಮಯ್ಯನವರು ಹಿಂದೂ ದೇವಸ್ಥಾನ ಹಾಗೂ ಮಠ ವಶಕ್ಕೆ ಪಡೆಯಲು ಅಧಿಸೂಚನೆ ಹೊರಡಿಸಿತ್ತು. ಸಿದ್ದರಾಮಯ್ಯನವರು ಹಿಂದೂಗಳನ್ನೆ ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ. ಚರ್ಚ್, ಮಸೀದಿ ವಶಕ್ಕೆ ಪಡೆಯುವ ತಾಕತ್ತು ಸಿದ್ದರಾಮಯ್ಯನವರಿಗೆ ಏಕಿಲ್ಲ ಎಂದು ಕುಟುಕಿದರು.

ಸಿದ್ದರಾಮಯ್ಯ ಒಬ್ಬ ಬಿಕನಾಸಿ, ದೆವ್ವ ಹಾಗೂ ರಾವಣ ಎಂದು ಹರಿಹಾಯ್ದಿದ್ದು,  70ವರ್ಷದಿಂದ ಪಾಪ ಮಾಡಿರುವ ಕಾಂಗ್ರೆಸ್ ಗೆ ಇಲ್ಲಿ ಬದುಕಲು ಅಧಿಕಾರವಿಲ್ಲ. ನೀವೇನಾದ್ರೂ ಕಾಂಗ್ರೆಸ್ಸಿಗರನ್ನ ಹೊಡದ್ರೇ ನಿಮ್ಮ ಕೈ ಕೊಳೆಯಾಗುತ್ತೆ. ಹೀಗಾಗಿ ಅವರೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿ.  ಕರ್ನಾಟಕದಲ್ಲಿ ಕಾಂಗ್ರೆಸ್ ನ ಆತ್ಮಹತ್ಯೆ ಸಿದ್ದತೆ ನಡೆದಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಾಂಗ್ರೆಸ್ ನ ದೊಡ್ಡ ದೊಡ್ಡ ನೇತಾರರು ಆ ಮನೆ ಖಾಲಿ ಮಾಡಿ ಬಿಜೆಪಿಗೆ ಬರುತ್ತಿದ್ದಾರೆ. ದೆವ್ವ ಹೊಕ್ಕಿರುವ ಮನೆಯಲ್ಲಿ ಯಾರು ಇರುವುದಿಲ್ಲ. ಸಿದ್ದರಾಮಯ್ಯ ಇರೋ ಕಡೆ ಯಾರು ನಿಲ್ಲುವುದಿಲ್ಲ ಎಂದಿದ್ದಾರೆ.

ಪ್ರಧಾನಿಯವರ ಯೋಜನೆ ಇಲ್ಲಿನ ಹಳ್ಳಿಗಳಿಗೆ ತಲುಪಿಲ್ಲ. ಇದಕ್ಕೆ ಕಾರಣ ಕರ್ನಾಟಕದಲ್ಲಿ ರಾವಣ ರಾಜ್ಯ ಇದೆ ಎಂದು ಸಿದ್ದರಾಮಯ್ಯನವರನ್ನು ರಾವಣನಿಗೆ ಹೋಲಿಕೆ ಮಾಡಿದ್ದಾರೆ. ಬಿಕನಾಸಿ ಸಿದ್ದರಾಮಯ್ಯ ಗೆ ಮೋದಿ ಪೋಟೊ ಹಾಕುವ ಯೋಗ್ಯತೆ ಇಲ್ಲ.  ಮೋದಿ ಕರ್ನಾಟಕ ಸರ್ಕಾರಕ್ಕೆ 1.63 ಸಾವಿರ ಕೋಟಿ ಅಭಿವೃದ್ಧಿಗೆ ಕೊಟ್ಟಿದ್ದಾರೆಆದರೆ ಈ ಹಣವನ್ನ ಕಾಂಗ್ರೆಸ್ ನವರು ಮೊದಲನೇ‌ ಮನೆಯಲ್ಲಿ ಇಡ್ತಾರೋ ಎರಡನೇ ಮನೆಯಲ್ಲಿ ಇಡ್ತಾರೋ ಗೊತ್ತಾಗುವುದಿಲ್ಲ. ನಾವಿರೊವರೆಗೂ ನಮ್ಮ ಧರ್ಮದ ಜೊತೆಗಿರಬೇಕು. ಇಲ್ಲವಾದ್ರೆ ನಮ್ಮನ್ನು ಒಡಿತಾರೆ. ದೇಶವನ್ನು ಹಾಳು ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

 

One thought on “ಸಿದ್ರಾಮಯ್ಯ ಒಬ್ಬ ಬಿಕನಾಸಿ, ಕಾಂಗ್ರೆಸ್‌ ಆತ್ಮಹತ್ಯೆ ಮಾಡಿಕೊಳ್ಳೋ ಹಾಗಾಗ್ಲಿ : ಅನಂತ್ ಕುಮಾರ್ ಹೆಗಡೆ

  • May 7, 2018 at 11:24 PM
    Permalink

    Thu ninna naligena saganni ganju haki thikka… Yogythe irbeku Siddu bagge mathadoke… Ninge adu ila bayi bitre samskrutha ide na neenu kalthirodu??

    Reply

Leave a Reply

Your email address will not be published.

Social Media Auto Publish Powered By : XYZScripts.com