ಸಿದ್ದರಾಮಯ್ಯ ಪರ ಕಿಚ್ಚ ಸುದೀಪ್‌ ಪ್ರಚಾರ : ಆರಂಭಕ್ಕೂ ಮುನ್ನ ಕೇಳಿಬಂತು ವಿರೋಧ

ಬಾಗಲಕೋಟೆ : ಸಿಎಂ ಸಿದ್ದರಾಮಯ್ಯ ಪರ ನಟ ಸುದೀಪ್‌ ಪ್ರಚಾರಕ್ಕೆ ತೆರಳುತ್ತಾರೆ ಎಂಬ ವಿಷಯ ಕೇಳಿಬಂದ ಆರಂಭದಲ್ಲೇ ವಿರೋಧ ವ್ಯಕ್ತವಾಗಿದೆ.

ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಮೇ 9ರಂದು ಪ್ರಚಾರ ನಡೆಸಲು ವೇಳಾಪಟ್ಟಿ ನಿಗದಿಯಾಗಿದ್ದು, ಅದೇ ದಿನ ನಟ ಸುದೀಪ್‌ ಸಹ ಸಿಎಂ ಪರ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸುದೀಪ್‌ ರಾಜಕೀಯ ಪಕ್ಷದ ಪರ ಪ್ರಚಾರ ಮಾಡಲು ಕ್ರಾಂತಿ ವೀರ ಸಿಂಧೂರ ಲಕ್ಷ್ಮಣ ಯುವಸೇನೆ ಆಕ್ಷೇಪಿಸಿದೆ.

ಕಾಂಗ್ರೆಸ್‌ ಸರ್ಕಾರ  ತನ್ನ ಆಡಳಿತಾವಧಿಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ಸೂಕ್ತ ಮೀಸಲಾತಿ ನೀತಿ ಬೇಡಿಕೆಯನ್ನು ಪೂರೈಸದ ಹಿನ್ನೆಲೆಯಲ್ಲಿ ಯುವಸೇನೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದು, ಇಂತಹವರ ಪರ ಸುದೀಪ್‌ ಪ್ರಚಾರ ಮಾಡಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಶ್ರೀರಾಮುಲು ಬಾದಾಮಿಯಲ್ಲಿ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕನಾಗಿದ್ದು, ಈ ಮತಗಳನ್ನು ಸೆಳೆಯಲು ವಾಲ್ಮೀಕಿ ಸಮುದಾಯದ ಸುದೀಪ್‌ ಅವರ ನ್ನು ಪ್ರಚಾರಕ್ಕೆ ಕರೆತರಲು ಸಿದ್ಧತೆ ನಡೆಸಲಾಗಿತ್ತು.

 

 

One thought on “ಸಿದ್ದರಾಮಯ್ಯ ಪರ ಕಿಚ್ಚ ಸುದೀಪ್‌ ಪ್ರಚಾರ : ಆರಂಭಕ್ಕೂ ಮುನ್ನ ಕೇಳಿಬಂತು ವಿರೋಧ

Leave a Reply

Your email address will not be published.

Social Media Auto Publish Powered By : XYZScripts.com