ನೀವು ಹುಟ್ಟಿದ ತಿಂಗಳು ಗೊತ್ತಿದ್ಯಾ…ಹಾಗಾದ್ರೆ ನಿಮ್ಮ ಲವ್‌ ಲೈಫ್‌ ಹೇಗಿರುತ್ತೆ ಅನ್ನೋದನ್ನ ತಿಳ್ಕೊಳ್ಳಿ…

ಜ್ಯೋತಿಷ್ಯ ಎಂದರೆ ಎಲ್ಲರಿಗೂ ಒಂದು ರೀತಿ ಕುತೂಹಲ ಹೆಚ್ಚು. ನಮ್ಮ ಜೀವನದ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಅಲ್ಲದೆ ಅದು  ಸತ್ಯವಾಗುತ್ತದೆ ಎಂದೂ ನಂಬುತ್ತಾರೆ.

ಇನ್ನು ನಾವು ಹುಟ್ಟಿದ ತಿಂಗಳು ಗೊತ್ತಿದ್ದರೆ ಸಾಕು ನಮ್ಮ ಜೀವನ ಹೇಗಿರುತ್ತದೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಕೊ ಳ್ಳಬಹುದು. ಹಾಗಾದರೆ ನೀವು ಯಾವ ತಿಂಗಳಲ್ಲಿ ಹುಟ್ಟಿದ್ದಿರಿ, ನಿಮ್ಮ ಜೀವನ ಹೇಗಿರುತ್ತದೆ ಎಂಬುದಲ್ಲಿ ತಿಳಿದುಕೊಳ್ಳಿ.

ಜನವರಿ : ಜನವರಿಯಲ್ಲಿ ಹುಟ್ಟಿದವರು ಆಕರ್ಷಣೀಯವಾಗಿರುತ್ತಾರೆ. ಜೊತೆಗೆ ತಮ್ಮ ಸಹವಾಸದಿಂದ ಇತರರನ್ನೂ ಆಕರ್ಷಣೀಯವಾಗಿ ಕಾಣುವಂತೆ ಮಾಡುವ  ಚತುರತೆ ಇವರಲ್ಲಿರುತ್ತದೆ. ತಮ್ಮ ಎದುರಿಗಿರುವವರನ್ನು ಸುಲಭವಾಗಿ ನಂಬಿ ಬಳಿಕ ಮೋಸ ಹೋಗುತ್ತಾರೆ. ಮನಸ್ಸಿನ ತುಂಬ ಪ್ರೀತಿಯಿರುವ ವ್ಯಕ್ತಿಯಾಗಿದ್ದು ಸಂಗಾತಿಯನ್ನು ಜೋಪಾನವಾಗಿ, ಸ್ವಾತಂತ್ರ್ಯವಾಗಿ ಬಿಡುವ ಪ್ರವೃತ್ತಿ ಇವರದ್ದಾಗಿರುತ್ತದೆ. ಉತ್ತಮ ಸಂಸಾರ ನಿರ್ವಹಣೆ ಮಾಡುತ್ತಾರೆ.

ಫೆಬ್ರವರಿ : ಈ ತಿಂಗಳಲ್ಲಿ ಹುಟ್ಟಿದವರು ಬಹಳ ತೀಕ್ಷ್ಣ ಬುದ್ದಿಯುಳ್ಳವರು, ಆ್ಯಕ್ಟಿವ್‌ ವ್ಯಕ್ತಿಯಾಗುತ್ತಾರೆ. ಎಲ್ಲಾ ಕೆಲಸಗಳೂ ಬೇಗ ಬೇಗ ಮುಗಿಯಬೇಕು ಎಂಬ ಆತುರ ಇರುತ್ತದೆ. ಆದರೆ ಎಲ್ಲರೊಂದಿಗೂ ಅಷ್ಟಾಗಿ ಹೊಂದಿಕೊಳ್ಳುವುದಿಲ್ಲ. ಸಂಕೋಚ ಸ್ವಭಾವ ಜಾಸ್ತಿ, ಪ್ರೀತಿಯನ್ನು ನಬೇಗ ವ್ಯಕ್ತಪಡಿಸುವುದಿಲ್ಲ. ಆದರೆ ಸುಖವಾದ ಸಂಸಾರ ನಡೆಸುತ್ತಾರೆ.

ಮಾರ್ಚ್‌ : ಈ ರಾಶಿಯವರಿಗೆ ಪ್ರವಾಸ ಎಂದ ರೆ ಬಹಳ ಇಷ್ಟ. ಸದಾ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಲೇ ಇರುತ್ತಾರೆ. ಇವರೂ ನಾಚಿಕೆ ಸ್ವಭಾವವರಾಗಿದ್ದು, ಪ್ರೀತಿ ವಿಚಾರದಲ್ಲಿ ಗಟ್ಟಿಯಾಗಿರುತ್ತಾರೆ. ಇವರೂ ಸಂಗಾತಿಯನ್ನು ಬಹಳ ಪ್ರೀತಿಸುವಂತಹವರಾಗಿರುತ್ತಾರೆ.

ಏಪ್ರಿಲ್ : ಏಪ್ರಿಲ್‌ನಲ್ಲಿ ಹುಟ್ಟಿದವರು ಗಡು ಸ್ವಭಾವದವರಾಗಿರುತ್ತಾರೆ. ಯಾರಿಗೂ ಬಗ್ಗದ ಇವರ ವ್ಯಕ್ತಿತ್ವವೇ ಇವರಿಗೆ ಮುಳ್ಳಾಗಲಿದೆ. ಮೂಗಿನ ತುದಿಯಲ್ಲೇ ಕೋಪವಿರ ಲಿದ್ದು, ಜೀವನದಲ್ಲಿ ಪರ್ಫೆಕ್ಟ್ ಆಗಿರಬೇಕು ಎಂದು ಬಯಸುತ್ತಾರೆ. ಆದರೆ ಸಂಗಾತಿಯೂ ಅದೇ ತಿಂಗಳು ಹುಟ್ಟಿದ್ದರೆ ಸಮಸ್ಯೆ ಇಲ್ಲ. ಇಲ್ಲವಾದರೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇರುತ್ತದೆ.

ಮೇ : ತನ್ನದೇ ನಿರ್ಣಯಕ್ಕೆ ಹೆಚ್ಚಿನ ಮಹತ್ವ ಕೊಡುವ ಇವರು, ಬೇರೆಯವರ ನಿರ್ಣಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಶ್ರಮಜೀವಿಗಳಾಗಿದ್ದು, ನಾನು ಮಾಡಿದ್ದೇ ಸರಿ ಎಂಬ ಹಂಬತನ ಹೆಚ್ಚಿರುತ್ತದೆ. ಆದರೆ ಕುಟುಂಬವನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವವರಾಗಿುತ್ತಾರೆ.

ಜೂನ್‌ : ಇವರು ಪ್ರೀತಿಗೆ ಯೋಗ್ಯ ಜೀವಿಯಾಗಿರುತ್ತಾರೆ. ರೊಮ್ಯಾಂಟಿಕ್‌ ಆಗಿರುವ ಇವರು ಎಲ್ಲರಿಗೂ ಬಹಳ ಬೇಗ ಹತ್ತಿರವಾಗುತ್ತಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಸಂಗಾತಿಯನ್ನು ಅಂಗೈನಲ್ಲಿಟ್ಟು ಜೋಪಾನ ಮಾಡುವ  ಸ್ವಭಾವ ಇವರದ್ದು.

ಜುಲೈ ; ನಿಯತ್ತಿಗೆ ಹೆಸರುವಾಸಿಯಾಗಿರುವ ಇವರು, ಬೇರೆಯವರ ಭಾವನೆಗಳಿಗೆ ಸ್ಪಂದಿಸುತ್ತಾರೆ. ಆದರೆ ಇವರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಒಮ್ಮೆ ಸಿಟ್ಟಿಗೆದ್ದರೆ ಮತ್ತೆ ಅವರನ್ನು ಸರಿ ಮಾಡುವುದು ಕಷ್ಟ. ಆದರೆ ಪ್ರೀತಿಯಲ್ಲಿ ಒಂದು ಕೈ ಮೇಲಿರುತ್ತಾರೆ.

ಆಗಸ್ಟ್‌ : ಸಮಾಜದಲ್ಲಿ ಪ್ರಮುಖ ವ್ಯಕ್ತಿಯಾಗಿರುತ್ತಾರೆ. ಹಣ ಸಂಪಾದಿಸುವುದು ಇವರಿಗೆ ಸುಲಭ. ಪ್ರೀತಿಸಿದವರ ಬಗ್ಗೆ ಬಹಳ ಕೇರ್‌ ತೆಗೆದುಕೊಳ್ಳುತ್ತಾರೆ. ಜೊತೆಗೆ ಫ್ಯಾಮಿಲಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ.

ಸೆಪ್ಟಂಬರ್‌ : ಬುದ್ದಿವಂತರಾಗಿರುವ ಇವರು ನನಗೆಲ್ಲ ತಿಳಿದಿದೆ ಎಂದೇ ಭಾವಿಸುತ್ತಾರೆ. ಇದರಿಂದಲೇ ಎಲ್ಲಾ ಸಂಬಂಧಗಳೂ ಹಾಳಾಗುತ್ತವೆ. ತಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುವ ಇವರು ಹೊರಗಿನಿಂದ ಭಂಡರಂತೆ ಗೋಚರಿಸುತ್ತಾರೆ. ಆದರೆ ಮನಸ್ಸಿನಿಂದ ಮಕ್ಕಳಾಗಿರುತ್ತಾರೆ.

ಅಕ್ಟೋಬರ್‌ : ಈ ತಿಂಗಳಲ್ಲಿ ಹುಟ್ಟಿದವರು ಜಿಪುಣರಾಗಿರುತ್ತಾರೆ. ಅಲ್ಲದೆ ತಾವಂದುಕೊಂಡ ದ್ದನ್ನು ಸಾಧಿಸುವ ಗುಣ ಇವರಲ್ಲಿದೆ. ಎಲ್ಲರನ್ನೂ ತುಂಬ ಪ್ರೀತಿಯಿಂದ ನೋಡಿಕೊಳ್ಳುವ ಇವರು ಭಾವನಾ ಜೀವಿಯಾಗಿರುತ್ತಾರೆ. ತಾನು ಪ್ರೀತಿಸಿದಂತೆಯೇ ಇತರರೂ ನನ್ನನ್ನು ಪ್ರೀತಿಸಲಿ ಎಂದು ಅಂದುಕೊಳ್ಳುತ್ತಾರೆ.

ನವೆಂಬರ್‌ : ಸುಂದರ ವ್ಯಕ್ತಿತ್ವದವರಾಗಿರುವ ಇವರು, ನೋಡಲೂ ಆಕರ್ಷಣೀಯವಾಗಿರುತ್ತಾರೆ. ಜನರೊಂದಿಗೆ ಉತ್ತಮವಾಗಿ ಬೆರೆಯುವ ಗುಣ ಹೊಂದಿರುವ ಇವರು ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

ಡಿಸೆಂಬರ್‌ : ಇವರಿಗೆ ನೆಗೆಟಿವ್‌ ಯೋಚನೆಗಳು ಹೆಚ್ಚು. ವೇದಾಂತಿಗಳಂತೆ ಮಾತನಾಡುತ್ತಾರೆ. ಸಹನೆ ಕಡಿಮೆ ಇದ್ದು, ಹೊಗಳಿಕೆಯನ್ನುನ ಇಷ್ಟಪಡುತ್ತಾರೆ. ಇತರರೊಂದಿಗೆ ಹೊಂದಿಕೊಳ್ಳುವ ಗುಣ ಕಡಿಮೆ. ಆದರೆ ಒಮ್ಮೆ ಪ್ರೀತಿಸಿದರೆ ಎಂದಿಗೂ ಕೈ ಬಿಡುವುದಿಲ್ಲ.

 

Leave a Reply

Your email address will not be published.

Social Media Auto Publish Powered By : XYZScripts.com