CSK vs RCB : ಮುಂದಿನ ಪಂದ್ಯದಲ್ಲಿ ಆಡಲಿದ್ದಾರಾ ಡಿವಿಲಿಯರ್ಸ್..? : ABD ಹೇಳಿದ್ದೇನು..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್ ಅನಾರೋಗ್ಯದ ಕಾರಣದಿಂದ ಕಳೆದು ಎರಡು ಪಂದ್ಯಗಳಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಕೆಕೆಆರ್ ಹಾಗೂ ಮುಂಬೈ ವಿರುದ್ಧದ ಪಂದ್ಯಗಳಲ್ಲಿ ಎಬಿಡಿ ಸ್ಫೋಟಕ ಬ್ಯಾಟಿಂಗ್ ನ್ನು ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದರು.

ಇದೀಗ ಆರ್ ಸಿಬಿ ಅಭಿಮಾನಿಗಳಿಗೆ ಡಿವಿಲಿಯರ್ಸ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಶನಿವಾರ ಪುಣೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ತಾವು ಆಡಲಿರುವುದಾಗಿ ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

Image result for ab devilliers kohli

ಸಂದರ್ಶನವೊಂದರಲ್ಲಿ ಮಾತನಾಡಿರುವ ಎಬಿಡಿ ‘ ಕಳೆದ 4 ದಿನ ಜ್ವರ, ತಲೆನೋವು ನನ್ನನ್ನು ವಿಪರೀತ ಬಾಧಿಸಿತ್ತು, ನಾಲ್ಕೂ ದಿನಗಳನ್ನು ಚಿಕಿತ್ಸೆ ಪಡೆಯುತ್ತ ಹಾಸಿಗೆಯಲ್ಲಿಯೇ ಕಳೆದಿದ್ದೇನೆ. ಈಗ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಸಂಪೂರ್ಣ ಗುಣಮುಖನಾಗಿದ್ದೇನೆ ಎನಿಸುತ್ತಿದೆ. ಚೆನ್ನೈ ವಿರುದ್ಧದ ಪಂದ್ಯ ನಮ್ಮ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಮುಂದಿನ ಮ್ಯಾಚ್ ಆಡಲು ತಯಾರಾಗಿದ್ದೇನೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com